ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ, ಧಾರ್ಮಿಕ ಸಭೆ

0

ಆಚರಣೆಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಆಗಬೇಕು: ಭಾಗೀರಥಿ ಮುರುಳ್ಯ

ಪುತ್ತೂರು: ಗಣೇಶೋತ್ಸವವಕ್ಕೆ ತನ್ನದೇ ಆದ ಇತಿಹಾಸವಿದೆ. ಅಂದು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತಿಲಕರು ಜನರನ್ನು ಒಟ್ಟುಗೂಡಿಸುವ ಸಲುವಾಗಿ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಣೆಗೆ ತಂದರು.ಅಂದಿನಿಂದ ಇಂದಿನವರೇಗೆ ಅಲ್ಲಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ನಡೆಯುತ್ತಿದೆ. ಪ್ರತಿಯೊಂದು ಆಚರಣೆಯ ಹಿಂದೆಯೂ ಅದರದೇ ಆದ ಇತಿಹಾಸವಿದೆ. ಆಚರಣೆಯ ಮಹತ್ವ, ಅದರ ವಿಶೇಷತೆಗಳನ್ನು, ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ, ಮುಟ್ಟಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯ ವ್ಯಕ್ತಪಡಿಸಿದರು.


ಅವರು ಒಳಮೊಗ್ರು ಗ್ರಾಮದ ಕುಂಬ್ರ ರಾಮಗಿರಿ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುತ್ತಿರುವ 43 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ 2ನೇ ದಿನವಾದ ಸೆ.8 ರಂದು ನಡೆದ ಧಾರ್ಮಿಕ ಸಭೆಯಲ್ಲಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊದಲ ಪೂಜೆಯನ್ನು ಪಡೆಯುವ ಮೂಲಕ ಅಗ್ರಮಾನ್ಯ ಸ್ಥಾನವನ್ನು ಪಡೆದುಕೊಂಡಿರುವ ಗಣೇಶನ ಆರಾಧನೆಯಿಂದ ನಮ್ಮಲ್ಲಿರುವ ವಿಘ್ನಗಳು ದೂರವಾಗಿ ನಿರ್ವಿಘ್ನವಾಗಿ ಜೀವನ ಸಾಗಲಿ ಎಂಬ ಹಾರೈಕೆಯನ್ನು ಮಾಡಿದ ಶಾಸಕರು, ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಒಗ್ಗಟ್ಟಾಗಿ ಜೀವನ ಮಾಡುವ ಸಮಾಜಕ್ಕೆ ತನ್ನಿಂದ ಸಾಧ್ಯವಾಗುವ ಒಳ್ಳೆಯ ಕೆಲಸಗಳನ್ನು ಮಾಡುವ ಎಂದು ಹೇಳಿ, ಹಿರಿಯರು ಹಾಕಿಕೊಟ್ಟ ಗಣೇಶೋತ್ಸವವನ್ನು ಕಿರಿಯರು ಹಿರಿಯರ ಆಶೀರ್ವಾದ ಪಡೆದುಕೊಂಡು ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ ಕುಂಬ್ರ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳಿಗೆ, ಭಕ್ತರಿಗೆ ಶಾಸಕಿ ಭಾಗೀರಥಿ ಮುರುಳ್ಯರವರು ಶುಭ ಹಾರೈಸಿದರು. ಪ್ರಾರಂಭದಲ್ಲಿ ಬಾಲಗಂಗಾಧರನಾಥ ತಿಲಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.


ಜನ್ಮ ಉತ್ಸವವಾಗಬೇಕಾದರೆ ಧರ್ಮ ಮಾರ್ಗದಲ್ಲಿ ನಡೆಯಬೇಕು: ವಾದಿರಾಜ ಕಲ್ಲೂರಾಯ
ಧರ್ಮ ಜಾಗೃತಿ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಧಾರ್ಮಿಕ ಉಪನ್ಯಾಸಕರು,ಯಕ್ಷಗಾನ ಕಲಾವಿದರು ಆಗಿರುವ ವಾದಿರಾಜ ಕಲ್ಲೂರಾಯರವರು ಮಾತನಾಡಿ, ಮಾನವರಾದ ನಮ್ಮ ಜನ್ಮ ಉತ್ಸವವಾಗಬೇಕಾದರೆ ನಾವು ಧರ್ಮ ಮಾರ್ಗದಲ್ಲಿ ನಡೆಯುವಂತವರಾಗಬೇಕು, ನಮ್ಮಲ್ಲಿ ಧರ್ಮದ ಬಗ್ಗೆ ನಂಬಿಕೆ ಇರಬೇಕು. ನಾವು ಮಾಡುವ ಕೆಲಸದಲ್ಲಿ ಸಂಸ್ಕಾರ ಮತ್ತು ಶ್ರದ್ಧೆ ಇರಬೇಕು ಹಾಗಾದರೆ ಮಾತ್ರ ನಮ್ಮ ಜನ್ಮ ಉತ್ಸವವಾಗುತ್ತದೆ ಎಂದರು. ಯಾವುದೇ ಆಚರಣೆಗಳು ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸುವಂತಾಗಬೇಕು ಎಂದು ಹೇಳಿದ ಅವರು ಧರ್ಮಜಾಗೃತಿಯ ಬಗ್ಗೆ ಉಪನ್ಯಾಸ ನೀಡಿದರು.


ಅತಿಥಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಿಂಗಳಾಡಿ ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿಯ ಅಧ್ಯಕ್ಷ ಹರೀಶ ಪುತ್ತೂರಾಯರ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಬೆಂಗಳೂರು ಹೈಕೋರ್ಟ್ ವಕೀಲ ರಾಹುಲ್ ರೈ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಗಂಗಾಧರ ರೈ ಕುಯ್ಯಾರು, ದರ್ಬೆತ್ತಡ್ಕ ಕುಕ್ಕುತ್ತಡಿ ಶ್ರೀನಾಗಬ್ರಹ್ಮ ಗರಡಿಯ ಆಡಳಿತ ಮೊಕ್ತೇಸರ ಜಯರಾಮ ಪೂಜಾರಿ ಕುಕ್ಕುತ್ತಡಿ, ಕುಂಬ್ರ ಗಣೇಶೋತ್ಸವ ಸಮಿತಿಯ ಸಂಚಾಲಕ ರಾಜೇಶ್ ರೈ ಪರ್ಪುಂಜ ಉಪಸ್ಥಿತರಿದ್ದರು.

ಸ್ಮೃತಿ ಪಲ್ಲತ್ತಾರು ಪ್ರಾರ್ಥಿಸಿದರು. ಸಮಿತಿಯ ಗೌರವ ಲೆಕ್ಕಪರಿಶೋಧಕರಾದ ಚಂದ್ರಕಾಂತ ಶಾಂತಿವನ ಸ್ವಾಗತಿಸಿದರು. ಸಮಿತಿಯ ಉಪಾಧ್ಯಕ್ಷ ರತನ್ ರೈ ಕುಂಬ್ರ ವಂದಿಸಿದರು. ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು ಸಹಕರಿಸಿದ್ದರು.


ಸೆ.9 ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ
ಸೆ.9 ರಂದು ಬೆಳಿಗ್ಗೆ ವೈಧಿಕ ಕಾರ್ಯಕ್ರಮಗಳು, ಭಕ್ತಿರಸಮಂಜರಿ, ಮಹಾಪೂಜೆ, ಅನ್ನಸಂತರ್ಪಣೆ,ಯಕ್ಷಗಾನ ಬಯಲಾಟ, ಸಂಜೆ ಭಜನೆ, ಮಹಾಪೂಜೆ ಬಳಿಕ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಇದೇ ವೇಳೆ ಕುಂಬ್ರ ಕಟ್ಟೆಯ ಬಳಿ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here