ಪುತ್ತೂರು: ಪುತ್ತೂರು ನಗರಸಭೆ ಸ್ಥಾಯಿ ಸಮಿತಿ ಸದಸ್ಯರನ್ನು ಸೆ.17 ರ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ನಗರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಲೀಲಾವತಿ ಅಣ್ಣು ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಬಾಲಚಂದ್ರ ಅವರ ಪ್ರಥಮ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರ ನೇಮಕಾತಿ ನಡೆಯಿತು.
ಸದಸ್ಯೆ ವಿದ್ಯಾಗೌರಿ ಅವರು ಸದಸ್ಯರನ್ನು ಸೂಚಿಸಿದರು. ಮಮತಾ ರಂಜನ್ ಅವರು ಆಯ್ಕೆಯನ್ನು ಅನುಮೋದಿಸಿದರು. ಸ್ಥಾಯಿ ಸಮಿತಿ ಸದಸ್ಯರಾಗಿ ಬಾಳಪ್ಪ ಪೂಜಾರಿ ಯಾನೆ ಸುಂದರ ಪೂಜಾರಿ, ಗೌರಿ, ಮೋಹಿನಿ, ಪೂರ್ಣಿಮ, ರಮೇಶ್ ರೈ, ಪ್ರೇಮ್ ಕುಮಾರ್, ಸಂತೋಷ್ ಬೊಳುವಾರು, ದೀಕ್ಷಾ ಪೈ, ಮನೋಹರ್ ಕಲ್ಲಾರೆ ಅವರು ಆಯ್ಕೆಯಾಗಿದ್ದಾರೆ.