ಕಾಣಿಯೂರು: ಒಡಿಯೂರು ಗ್ರಾಮ ವಿಕಾಸ ಯೋಜನೆಯು ಹಲವಾರು ಸೇವಾ ಕಾರ್ಯಗಳನ್ನು ಆಯೋಜಿಸುತ್ತಿದ್ದು, ಬಡವರ ಮನೆ ಬೆಳಗುವ ಕಾರ್ಯದಲ್ಲಿಯೂ ಯೋಜನೆ ಪ್ರಮುಖ ಪಾತ್ರವಹಿಸುತ್ತಿದೆ. ಶಿಸ್ತು, ಸಂಸ್ಕಾರದ ಬದುಕು ಕಲ್ಪಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಒಡಿಯೂರು ಶ್ರೀಯವರ ಕಾರ್ಯ ಶ್ಲಾಘನೀಯ. ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿಯೂ ಕ್ಷೇತ್ರದ ಪಾತ್ರ ಹಿರಿದು ಎಂದು ಒಡಿಯೂರು ಗ್ರಾಮ ವಿಕಾಸ ಯೋಜನೆಯ ಚಾರ್ವಾಕ ಘಟ ಸಮಿತಿಯ ಅಧ್ಯಕ್ಷರಾದ, ಚಾರ್ವಾಕ ಸಿ.ಎ ಬ್ಯಾಂಕಿನ ನಿವೃತ್ತ ಸಹಾಯಕ ಶಾಖಾ ವ್ಯವಸ್ಥಾಪಕರಾದ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು ಹೇಳಿದರು. ಅವರು ಸೆ.22ರಂದು ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ನಡೆದ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಚಾರ್ವಾಕ ಗ್ರಾಮದಲ್ಲಿ 7 ವರ್ಷ ಸೇವಾದಿಕ್ಷಿತೆಯಾಗಿ ಕರ್ತವ್ಯ ನಿರ್ವಹಿಸಿ, ಸೇವೆಯಿಂದ ನಿವೃತ್ತಿಹೊಂದಿರುವ ಕವಿತಾ ಇಡ್ಯಡ್ಕರವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಳ್ಳೆಯ ಕೆಲಸ ಮಾಡಿದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸುಮಾರು 7 ವರ್ಷಗಳ ಕಾಲ ಚಾರ್ವಾಕ ಗ್ರಾಮದಲ್ಲಿ ಸೇವಾದೀಕ್ಷಿತೆಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಸಂಘದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಕವಿತಾ ಇಡ್ಯಡ್ಕರವರ ಪಾತ್ರ ಅವಿಸ್ಮರಣೀಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ ಅವರು ಮಾತನಾಡಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮೂಲಕ ಉತ್ತಮ ಯೋಜನೆಯನ್ನು ರೂಪಿಸಿ, ಕಾರ್ಯರೂಪಕ್ಕೆ ತರುವಂತದ್ದು ಶ್ಲಾಘನೀಯ, ಯೋಜನೆಯಿಂದ ಇನ್ನಷ್ಟೂ ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಶುಭಹಾರೈಸಿದರು. ದೈಪಿಲ ಕ್ಷೇತ್ರದ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷೆ ಚಂದ್ರಕಲಾ ಜಯರಾಮ್ ಅರುವಗುತ್ತು ಮಾತನಾಡಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯಿಂದ ಇನ್ನಷ್ಟೂ ಜನಪರ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಉನ್ನತ ಸಾಧನೆ ಮಾಡಲಿ ಎಂದು ಶುಭಹಾರೈಸಿದರು.
ಸನ್ಮಾನ ಸ್ವೀಕಾರಿಸಿ ಮಾತನಾಡಿದ ಸೇವಾದೀಕ್ಷಿತೆ ಕವಿತಾ ಇಡ್ಯಡ್ಕರವರು, ತನ್ನ ಸೇವಾವಧಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಡಬ ವಲಯ ಮೇಲ್ವೀಚಾರಕಿ ಕಾವ್ಯಲಕ್ಷ್ಮೀ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಯೋಜನೆಯ ಸವಣೂರು ವಲಯದ ಸಂಯೋಜಕಿ ವೇದಾವತಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪಂಜ ವಲಯದ ಸಂಯೋಜಕಿ ಜಯಶ್ರೀ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಚಾರ್ವಾಕ ಘಟ ಸಮಿತಿಯ ಸಂಘಟನಾ ಕಾರ್ಯದರ್ಶಿ ದಿನೇಶ್ ಗೌಡ ಇಡ್ಯಡ್ಕ ಶುಭಹಾರೈಸಿದರು. ಸಮಿತಿ ಉಪಾಧ್ಯಕ್ಷೆ ಸುಮಲತಾ, ಕಾರ್ಯದರ್ಶಿ ವಿಶಾಲಾಕ್ಷಿ, ಜತೆ ಕಾರ್ಯದರ್ಶಿ ಸೀತಮ್ಮ ಖಂಡಿಗ, ಸೇವಾದೀಕ್ಷಿತೆ ಹರಿಣಾಕ್ಷಿ ಸವಣೂರು ಉಪಸ್ಥಿತರಿದ್ದರು. ಬಾಬು ಗೌಡ, ಗೀತಾ ಬೊಮ್ಮೊಳಿಕೆ, ನಾರಾಯಣ್ ಕೋಲ್ಪೆ, ಸೌಮ್ಯ, ನವೀನ್, ರತಿ ಕೊಪ್ಪ, ಗೀತಾ ಕೋಲ್ಪೆ, ವರದಾ ಖಂಡಿಗ, ಕಮಲಾಕ್ಷಿ ಇಡ್ಯಡ್ಕ, ದಿನೇಶ್ ಕೀಲೆ, ಜಯಂತಿ ಜತ್ತೋಡಿ ಅತಿಥಿಗಳಿಗೆ ತಾಂಬೂಲ ನೀಡಿ ಗೌರವಿಸಿದರು. ವಿಶಾಲಾಕ್ಷಿ, ಗೀತಾ, ಜಯಂತಿ ಪ್ರಾರ್ಥಿಸಿದರು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ಚಾರ್ವಾಕ ಘಟ ಸಮಿತಿಯ ಉಪಾಧ್ಯಕ್ಷೆ ಸುಮಲತಾ ದೇವಸ್ಯ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸೀತಮ್ಮ ಖಂಡಿಗ ವಂದಿಸಿದರು. ಸಂಘದ ಸದಸ್ಯ ಕುಸುಮಾಧರ ಮರ್ಲಾಣಿ ಕಾರ್ಯಕ್ರಮ ನಿರೂಪಿಸಿದರು.
ಸೇವಾದೀಕ್ಷಿತೆ ಕವಿತಾ ಇಡ್ಯಡ್ಕರವರಿಗೆ ಸನ್ಮಾನ
ಒಡಿಯೂರು ಗ್ರಾಮ ವಿಕಾಸ ಯೋಜನೆಯ ಚಾರ್ವಾಕ ಗ್ರಾಮದಲ್ಲಿ ಸುಮಾರು 7 ವರ್ಷಗಳ ಕಾಲ ಸೇವಾದಿಕ್ಷಿತೆಯಾಗಿ ಕರ್ತವ್ಯ ನಿರ್ವಹಿಸಿ, ಇದೀಗ ತನ್ನ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದ ಕವಿತಾ ಇಡ್ಯಡ್ಕರವರನ್ನು ಒಡಿಯೂರು ಗ್ರಾಮ ವಿಕಾಸ ಯೋಜನೆಯ ಚಾರ್ವಾಕ ಘಟ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.