ಕೆಮ್ಮಾರ-ಗೋಕುಲನಗರ: ಬೈಲುವಾರು ಭಜನೆ

0

ಕೊಯಿಲ ಗ್ರಾಮ ಧಾರ್ಮಿಕತೆಯಲ್ಲಿ ರಾಜ್ಯಕ್ಕೆ ಮಾದರಿ: ಮನೋಹರ ಮಠದ್

ಕಡಬ: ಗ್ರಾಮದಲ್ಲಿ ನಿರಂತರ ಧಾರ್ಮಿಕ ಚಟುವಟಿಕೆ ನಡೆಸುವ ಮೂಲಕ ಕೊಯಿಲ ಗ್ರಾಮವು ಧಾರ್ಮಿಕತೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ದೇವಾಲಯಗಳ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕರಾದ ಮನೋಹರ ಮಠದ್ ಹೇಳಿದರು.


ಅವರು ಕೊಯಿಲ ಗ್ರಾಮದ ಕೆಮ್ಮಾರ_ಗೋಕುಲನಗರದಲ್ಲಿ ನಡೆದ ಬೈಲುವಾರು ಭಜನೆಯಲ್ಲಿ ಭಾಗಹಿಸಿ ಮಾತನಾಡಿದರು. ದೇವಸ್ಥಾನ ಕೇಂದ್ರಿತವಾಗಿ ಕೊಯಿಲ ಗ್ರಾಮದಲ್ಲಿ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು, ಬೈಲುವಾರು ವಿಂಗಡ, ಅದಕ್ಕಾಗಿ ನೇಮಿಸಿದ ಸಂಚಾಲಕ, ಮಹಿಳಾ ಪ್ರಮುಖ್, ಸದಸ್ಯರು, ಬೈಲುವಾರು ಮನೆಗಳ ಅಂಗಳದಲ್ಲಿ ನಡೆಯುವ ಭಜನೆ, ಅಂಗಳದಲ್ಲಿನ ಊಟ, ಮನೆ-ಮನೆಗೆ ಏಕಾರತಿ, ಘಂಟಾಮಣಿ, ಕೌಳಿಗೆ-ಚಮಚ ವಿತರಣೆ, ತವರುಲಕ್ಷ್ಮಿ ವಿಚಾರ, ಧಾರ್ಮಿಕತೆಯಲ್ಲಿ ಶೈಕ್ಷಣಿಕ ಜೋಡಣೆ, ಯೋಗ, ಧಾರ್ಮಿಕ ಶಿಕ್ಷಣ, ಮನೆ-ಮನೆಗಳಲ್ಲಿ ಮಕ್ಕಳಿಂದ ಶಾರದ ಪೂಜೆ, ತುಳಸಿ ಪೂಜೆ ನಡೆಯುತ್ತಿರುವುದು, ವಿಧ್ಯಾರ್ಥಿ ಸಾಧಕರಿಗೆ ಗೌರವಾರ್ಪಣೆ, ದೇವಸ್ಥಾನದ ವ್ಯವಸ್ಥೆ ಮತ್ತು ಭಕ್ತರು ಸೇರುವ ದೃಷ್ಟಿಯಲ್ಲಿ ಸಂಕ್ರಾಂತಿ ಪೂಜೆ, ಆ ದಿನದ ಗೌರವಾರ್ಪಣೆ, ಸ್ವಾಭಿಮಾನ, ಸಾಮರಸ್ಯ, ಗ್ರಾಮ ವಿಕಾಸದ ಪರಿಕಲ್ಪಣೆ ರಾಜ್ಯಕ್ಕೆ ಮಾದರಿಯಾಗಿದೆ. ಇವುಗಳು ಬೇರೆ ಬೇರೆ ಜಿಲ್ಲೆಗಳಲ್ಲೂ ಮಾಡಲು ಪ್ರೇರಣಾದಾಯಿ ಕಾರ್ಯಕ್ರಮವಾಗಿದೆ. ಈ ರೀತಿಯ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವ ಗ್ರಾಮದ ಎಲ್ಲಾ ಬಂಧುಗಳಿಗೆ, ಆಯೋಜಕರಿಗೆ ನನ್ನ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟುಪೂರ್ವ ಸದಸ್ಯ ಪ್ರಸನ್ನ ದರ್ಬೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here