puttur: ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ವಿಟ್ಲ ಶಾಖೆಯಲ್ಲಿ ಗ್ರಾಹಕರ ಸಂಪರ್ಕ ಸಭೆ ನಡೆಯಿತು. ಈ ಸಭೆಯಲ್ಲಿ ಸಹಕಾರಿಯ ಆಡಳಿತ ಮಂಡಳಿಯ ಅಧ್ಯಕ್ಷ ಸಹಕಾರ ರತ್ನ ಎ ಸುರೇಶ್ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಹಕಾರಿಯ ತತ್ವದ ಅಡಿಯಲ್ಲಿ ಒಡಿಯೂರು ಸಹಕಾರಿಯು ಗ್ರಾಹಕರ ನಂಬಿಕೆಗೆ ಚ್ಯುತಿ ಬಾರದಂತೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ಇವರು ಸಹಕಾರಿಯ ಪ್ರಧಾನ ಜೀವಾಳವೇ ಗ್ರಾಹಕರು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಏನೆಲ್ಲಾ ಸೌಲಭ್ಯಗಳನ್ನು ಜಾರಿಗೆ ತರಲಾಗಿದೆ ಎಂಬುದರ ಬಗ್ಗೆ ವಿವರಿಸಿದರು. ಸಹಕಾರಿಯ ಸದಸ್ಯರಾದ ಸುರೇಶ್ ಬನಾರಿ, ಚಂದ್ರಶೇಖರ್ ರೈ ಮುಡಿಮಾರ್, ಚಂದ್ರಶೇಖರ ಪಿ, ಜಾಯ್ ಪ್ರವೀಣ್, ನಾರಾಯಣ ಮೂಲ್ಯ ಸಹಕಾರಿ ಮತ್ತು ಶಾಖೆಯ ಬಗ್ಗೆ ಅಭಿಪ್ರಾಯವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಲಿಂಗಪ್ಪಗೌಡ ಪನೆಯಡ್ಕ, ನಿರ್ದೇಶಕರುಗಳಾದ ಗಣಪತಿ ಭಟ್ ಸೆರಾಜೆ, ಜಯಪ್ರಕಾಶ್ ರೈ ನೂಜಿಬೈಲು, ಅಶೋಕ್ ಕುಮಾರ್ ಯು ಎಸ್ ಬಿ ಸಿ ರೋಡ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳು, ಆಡಳಿತ ಕಚೇರಿ ಸಿಬ್ಬಂದಿಯಾದ ಗಿರೀಶ್ ಮತ್ತು ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಟ್ಲ ಶಾಖಾ ವ್ಯವಸ್ಥಾಪಕರಾದ ರಾಜಿವಿ ಸ್ವಾಗತಿಸಿದರು.ಸಿಬ್ಬಂದಿಗಳಾದ ಶ್ರದ್ಧಾ ಹಾಗೂ ವನಿತಾ ಪ್ರಾರ್ಥಿಸಿದರು. ಶಾಖಾ ಸಿಬ್ಬಂದಿ ರಮ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾತಿ ವಂದಿಸಿದರು.