ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ, ಶಿರಾಡಿ ಗ್ರಾಮದ ಅಡ್ಡಹೊಳೆ ನಿವಾಸಿ ವಿನೀತಾ ತಂಗಚ್ಚನ್ ಎಂಬವರ ಮನೆಯಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದ್ದು, ನಗದು,ಚಿನ್ನ ಕಳವುಗೊಂಡಿದೆ.
ವಿನೀತಾ ತಂಗಚ್ಚನ್, ಅವರ ಪತಿ ತಂಗಚ್ಚನ್ ಹಾಗೂ ವಿಕಲಚೇತನ ಇಬ್ಬರು ಮಕ್ಕಳು ಡಿ.24ರಂದು ರಾತ್ರಿ 7 ಗಂಟೆ ವೇಳೆಗೆ ಮನೆಗೆ ಬೀಗ ಹಾಕಿಕೊಂಡು ಅಡ್ಡಹೊಳೆ ಮಲಂಕರ ಕಥೋಲಿಕ್ ಚರ್ಚ್‌ಗೆ ಹೋಗಿದ್ದರು. ಅವರು ರಾತ್ರಿ 10.30ರ ವೇಳೆಗೆ ಮನೆಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಅಂದಾಜು 80 ಸಾವಿರ ರೂ.ನಗದು, 35 ಗ್ರಾಂ ಚಿನ್ನಾಭರಣ ದೋಚಿದ್ದಾರೆ ಎಂದು ವರದಿಯಾಗಿದೆ.
ಕಳ್ಳತನಗೊಂಡಿರುವ ಬಗ್ಗೆ ಮನೆಯವರು ರಾತ್ರಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ರಾತ್ರಿಯೇ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಬೆಳಿಗ್ಗೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದೆ ಎಂದು ವರದಿಯಾಗಿದೆ.