ಪುತ್ತೂರು: ಎಸ್‌ಕೆಎಸ್‌ಎಸ್‌ಎಫ್ ಟ್ರೆಂಡ್ ಕರ್ನಾಟಕ ಯುಎಇ ಸಮಿತಿ ಇದರ ವತಿಯಿಂದ ಎಸ್‌ಕೆಎಸ್‌ಎಸ್‌ಎಫ್ ಟ್ರೆಂಡ್ ಕರ್ನಾಟಕ ರಾಜ್ಯ ಇದರ ಸಹಯೋಗದೊಂಡಿಗೆ ಟ್ರೆಂಡ್ ಎಕ್ಸಲೆನ್ಸಿ ಅವಾರ್ಡ್-2024 ವಿತರಣೆ ಕಾರ್ಯಕ್ರಮ ಡಿ.22ರಂದು ನೇರಳಕಟ್ಟೆ ಮಾಣಿ ಸಮಸ್ತ ಮಹಲ್ ಎಸ್‌ಕೆಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಈಸ್ಟ್ ಇದರ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ರಫೀಕ್ ಹುದವಿ ಕೋಲಾರ್ ಅಧ್ಯಕ್ಷತೆ ವಹಿಸಿದ್ದರು. ಅಹ್ಮದ್ ದಾರಿಮಿ ದುಆ ಮಾಡಿದರು. ಮುಹಮ್ಮದ್ ಮುಸ್ಲಿಯಾರ್ ಮುಂದೋಳೆ ಕಾರ್ಯಕ್ರಮ ಉದ್ಘಾಟಿಸಿದರು. ಅನಿಸ್ ಕೌಶರಿ, ಅಹ್ಮದ್ ದಾರಿಮಿ, ನೂರ್ ಮುಹಮ್ಮದ್ ನೀರ್ಕಜೆ ಸಂದರ್ಭೋಚಿತವಾಗಿ ಮಾತನಾಡಿದರು.
ಹಶೀಮ್ ರಹಿಮಾನಿ ಹಾಗೂ ಇಲ್ಯಾಸ್ ನೆರಳಕಟ್ಟೆ ಉಪಸ್ಥಿತರಿದ್ದರು. ಮದರಸದ 5, 7 ಹಾಗೂ 10ನೇ ತರಗತಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ಒಟ್ಟು 35 ವಿದ್ಯಾರ್ಥಿಗಳಿಗೆ ಟ್ರೆಂಡ್ ಎಕ್ಸಲೆನ್ಸಿ ಅವಾರ್ಡ್ – 2024 ವಿತರಣೆ ನಡೆಯಿತು. ಹಾರಿಸ್ ಕೌಶರಿ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು. ಮುನೀರ್ ಆತೂರು ಸ್ವಾಗತಿಸಿಸ, ಇಲ್ಯಾಸ್ ಪುಲಾಬೆ ವಂದಿಸಿದರು.