ಪುತ್ತೂರು: ಬೊಳುವಾರಿನಲ್ಲಿ ವೃತ್ತಿಪರ ತಾಂತ್ರಿಕ ತರಬೇತಿಗಳನ್ನು ನೀಡುತ್ತಿರುವ ಸಂಸ್ಥೆಯಾದ ಜ್ಞಾನಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ ವಾರ್ಷಿಕ ಕ್ರೀಡಾಕೂಟವು ಫೆ.25 ರಂದು ಕಲ್ಲೇಗ ಕಾರ್ಜಾಲ್ ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಕಲ್ಲೇಗ ದೇವಸ್ಥಾನದ ಅಧ್ಯಕ್ಷರಾದ ಅಜಿತ್ ಕುಮಾರ್ ಜೈನ್ ರವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ಕಬಡ್ಡಿ, ಕ್ರಿಕೆಟ್, ವಾಲಿಬಾಲ್ ಹಗ್ಗ ಜಗ್ಗಾಟ ಪಂದ್ಯಾಟಗಳನ್ನು ದೈಹಿಕ ಶಿಕ್ಷಕರಾದ ಸಂತೋಷ್, ನವೀನ್ ,ನಿತೇಶ್, ಸುರೇಂದ್ರ ನಡೆಸಿಕೊಟ್ಟರು. ಸಂಜೆ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಪುತ್ತೂರು ಗೃಹ ನಿರ್ಮಾಣ ಸಹಕಾರಿ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ್ ಶೆಟ್ಟಿ ಕೊಂಬಿಲ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಮಹೇಶ್ ಶೆಟ್ಟಿ, ಮುಖ್ಯ ಶಿಕ್ಷಕರಾದ ಹರ್ಷಿತ್ ಹನುಮಜೆ ಉಪಸ್ಥಿತರಿದ್ದರು.



