ಪುತ್ತೂರು: ಪುತ್ತೂರಿನ ಮಾನೈ ಆರ್ಕ್ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜಿನ ವಿದ್ಯಾರ್ಥಿಗಳ ಫ್ರೆಶರ್ಸ್ ಡೇ ಕಾರ್ಯಕ್ರಮವು ಮಹಾವೀರ ವೆಂಚರ್ಸ್ ಬೊಳ್ವಾರ್ ಸಭಾಂಗಣದಲ್ಲಿ ಸೆ.6ರಂದು ನಡೆಯಿತು .
ಸಂಸ್ಥೆಯ ಅಧ್ಯಕ್ಷೆ ಹೇಮಾವತಿ ಸುದರ್ಶನ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಗೋಕುಲ್ನಾಥ್ ಪಿ. ವಿ. ಸಂಸ್ಥೆಯ ಹುಟ್ಟು ಹಾಗೂ ಮಹತ್ವವನ್ನು ವಿವರಿಸಿದರು.

ಶ್ರೀ ಪ್ರಗತಿ ವಿಸ್ತಾರ ಕಾಲೇಜಿನ ಖಜಾಂಜಿ, ಮಾಜಿ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಪುತ್ತೂರಿನಲ್ಲಿ ಏವಿಯೇಷನ್ ಕೋರ್ಸ್ ಹಾಗೂ ಕಾಲೇಜನ್ನು ಪ್ರಪ್ರಥಮವಾಗಿ ಪರಿಚಯಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಗೋಕುಲ್ನಾಥ್ ಪಿ.ವಿ. ಅವರಿಗೆ ಸಲ್ಲುತ್ತದೆ ಎಂದರು. ಮುಂದುವರೆಸಿ ಪುತ್ತೂರಿನಲ್ಲಿ ಏವಿಯೇಷನ್ ಎನ್ನುವಂತಹ ವಿನೂತನ ಕೋರ್ಸ್ನ್ನು ಆರಂಭಿಸಿದ್ದೇವೆ. ಅದನ್ನು ಸದುಪಯೋಗ ಪಡಿಸಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದರು.

ಸಂಸ್ಥೆಯ ಉಪಾಧ್ಯಕ್ಷೆ ಹೇಮಲತಾ ಗೋಕುಲ್ನಾಥ್ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಮಾಧವಿ ಮಾತಾನಾಡಿ, ಫ್ರೆಶರ್ಸ್ ಡೇ ಕಾರ್ಯಕ್ರಮವು ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳ ಉತ್ತಮ ಭಾಂದವ್ಯವನ್ನು ಬೆಳೆಸುತ್ತದೆ ಹಾಗೂ ಹೊಸ ವಿದ್ಯಾರ್ಥಿಗಳ ಗೊಂದಲವನ್ನು ನಿವಾರಿಸುತ್ತದೆ ಎಂದರು. ಕಾಲೇಜಿನ ಆಡಳಿತ ಅಧಿಕಾರಿ ರಶ್ಮಿತಾ ಎಮ್. ಎಸ್ ಹಾಗೂ ಏವಿಯೇಷನ್ ಟ್ರೈನರ್ ಬಿಂದುಸಾಗರ್ ಶೆಟ್ಟಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಏವಿಯೇಷನ್ ಟ್ರೈನರ್ ಅಶ್ವಿತಾ ರೈ ಏವಿಯೇಷನ್ ಕ್ಷೇತ್ರದಲ್ಲಿ ಇರುವ ಕೋರ್ಸ್ಗಳು ಮತ್ತು ಉದ್ಯೋಗವಕಾಶಗಳ ಬಗ್ಗೆ ವಿವರಿಸಿದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ನೂತನ ವಿದ್ಯಾರ್ಥಿಗಳಿಗೆ ಗುಂಪು ಸ್ಪರ್ಧೆ ಮತ್ತು ವೈಯಕ್ತಿಕ ಸ್ಪರ್ಧೆಯನ್ನು ಆಯೋಜಿಸಿದರು.. ಉಪನ್ಯಾಸಕಿ ರಾನಿಹ ಅಲೀಶಾ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಹಕರಿಸಿದರು.

ಗಮನ ಸೆಳೆದ Ramp Walk
ಸಂಸ್ಥೆಯ ನೂತನ ವಿದ್ಯಾರ್ಥಿಗಳಿಗೆ Ramp Walk ಸ್ಪರ್ಧೆಯನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ವಿವಿಧ ಶೈಲಿಯ ಉಡುಗೆ ತೊಡುಗೆಗಳನ್ನು ಧರಿಸಿ ಪ್ರೇಕ್ಷಕರ ಗಮನ ಸೆಳೆದರು. ಸ್ಪರ್ಧೆಗೆ ತೀರ್ಪುಗಾರರಾಗಿ ಏವಿಯೇಷನ್ ತರಬೇತುದಾರರಾದ ಬಿಂದುಸಾಗರ್ ಶೆಟ್ಟಿ, ಚೈತನ್ಯ ಹಾಗೂ ಅಶ್ವಿತಾ ರೈ ಇವರು ಸಹಕರಿಸಿದರು.

ಸ್ಪರ್ಧೆಯಲ್ಲಿ ಮಿಸ್ಟರ್ ಫ್ರೆಶರ್ ಆಗಿ ಅನ್ವಿತ್ ಹಾಗೂ ಮಿಸ್ ಫ್ರೆಶರ್ ಆಗಿ ಹರ್ಷಿತಾ ಬಿರುದನ್ನು ತಮ್ಮದಾಗಿಸಿಕೊಂಡರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷನೀಯ ಹಾಗೂ ಮನೋರಂಜನಾತ್ಮಕ ಸಾಂಸ್ಕೃತಿಕ ವೈವಿಧ್ಯ ನಡೆದಿದ್ದು ನೋಡುಗರ ಉತ್ಸಾಹ ಹೆಚ್ಚಿಸಿತು. ಹಾಗೂ ನೂತನ ವಿದ್ಯಾರ್ಥಿಗಳಾದ ಮಹಮ್ಮದ್ ಹರ್ಷಕ್ ಹಾಗೂ ಹರ್ಷಿತಾ ಕಾಲೇಜಿನ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಯಾದ ಮಹಮ್ಮದ್ ರಿಹಾಮ್ ಸ್ವಾಗತಿಸಿದರು, ಹಿರಿಯ ವಿದ್ಯಾರ್ಥಿನಿ ಪ್ರವೀಕ್ಷಾ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಹರ್ಷಿತ ಮತ್ತು ತಂಡಪ್ರಾರ್ಥಿಸಿದರು, ಮಹಮ್ಮದ್ ಝಾಹಿದ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಅಬ್ದುಲ್ ನಾಸಿರ್ ನೆರವೇರಿಸಿದರು.
