ನೆಲ್ಯಾಡಿ: ಡಿಸಿಸಿ ಬ್ಯಾಂಕ್‌ನ ಶಾಖೆಯಲ್ಲಿ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

0

ನೆಲ್ಯಾಡಿ: ನಬಾರ್ಡ್‌ನ ಸಹಯೋಗದೊಂದಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನೆಲ್ಯಾಡಿ ಶಾಖೆಯಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ಸೆ.೨೨ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬ್ಯಾಂಕ್‌ನ ವಿಶ್ರಾಂತ ನಿರೀಕ್ಷಕ ನಟರಾಜ್‌ರವರು ಮಾತನಾಡಿ, ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲ ನೀಡಲು ಮಾತ್ರ ಸೀಮಿತವಾಗಿಲ್ಲ. ಪ್ರಸಕ್ತ ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳು ಗ್ರಾಹಕರಿಗೆ ಹಲವು ಯೋಜನೆಯನ್ನು ತಲುಪಿಸುವ ಕೆಲಸ ಮಾಡುತ್ತಿವೆ. ಜೊತೆಗೆ ವಿಮಾ ಸೌಲಭ್ಯವನ್ನು ಕಲ್ಪಿಸುವ ಯೋಜನೆಯನ್ನು ಹೊಂದಿವೆ ಎಂದರು.


ಮುಖ್ಯ ಅತಿಥಿಯಾಗಿದ್ದ ಕಡಬ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಮಾತನಾಡಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ ಗ್ರಾಹಕರಿಗೆ ನಗುಮಖದೊಂದಿಗೆ ತ್ವರಿತಗತಿಯಲ್ಲಿ ಸೇವೆ ನೀಡುತ್ತಿದೆ. ಬ್ಯಾಂಕ್‌ನ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇಂದ್ರ ಕುಮಾರ್‌ರವರು ಬ್ಯಾಂಕ್‌ನ ಅಭಿವೃದ್ಧಿಯ ರೂವಾರಿ. ಅವರಿಗೆ ಲಭಿಸಿರುವ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪ್ರಶಸ್ತಿಯೇ ಇದಕ್ಕೆ ನಿದರ್ಶನ ಎಂದರು. ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್ ಉಪಸ್ಥಿತರಿದ್ದರು.


ಶಾಖಾ ವ್ಯವಸ್ಥಾಪಕ ಭಾಸ್ಕರ ಪಿ.ಮಾತನಾಡಿ, ಬ್ಯಾಂಕಿನಲ್ಲಿ ಗರಿಷ್ಠ ಬಡ್ಡಿದರದಲ್ಲಿ ಠೇವಣಿ ಸ್ವೀಕರಿಸಲಾಗುತ್ತಿದೆ. ಬೇರೆ ಬೇರೆ ಉದ್ದೇಶಗಳಿಗೆ ಸಾಲ ಪಡೆಯಲು ಗ್ರಾಹಕರು ಶಾಖೆಗೆ ಭೇಡಿ ನೀಡುವಂತೆ ಹೇಳಿದರು.


ಶೈನೇಶ್, ಅರ್ಚನ, ಪದ್ಮಪ್ಪ ಪೂಜಾರಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಅನಿತಾಕುಮಾರಿ ಸ್ವಾಗತಿಸಿದರು. ವಿಕಾಸ್ ಪಿ.ವಿ.ಕಾರ್ಯಕ್ರಮ ನಿರೂಪಿಸಿದರು. ಪ್ರೇರಕ ಚಂದ್ರಗೌಡ ಪ್ರಾರ್ಥಿಸಿದರು. ದೈನಿಕ ಠೇವಣಿ ಸಂಗ್ರಾಹಕರಾದ ಸುಬ್ರಹ್ಮಣ್ಯ ಭಟ್, ಜನಾರ್ದನ, ಮಮತ, ಸವಿತ ಸಹಕರಿಸಿದರು.

LEAVE A REPLY

Please enter your comment!
Please enter your name here