




ಪುತ್ತೂರು: ಮುಡಿಪು ಇರಾ ನಿವಾಸಿ, ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ (68 ) ಅವರು ಡಿ.14ರಂದು ನಿಧನರಾದರು.



ಶ್ರೀಧರ ರೈ ಅವರು ಪುಂಡು ವೇಷ, ರಾಜ್ ವೇಷ, ಬಣ್ಣದ ವೇಷಧಾರಿಯಾಗಿ ಕೊಲ್ಲೂರು ಮೇಳ, ಸುಂಕದಕಟ್ಟೆ ಮೇಳ, ಭಗವತೀ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.





ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.








