






ರಾಮಕುಂಜ: ಹಳೆನೇರೆಂಕಿ ಹಾಗೂ ರಾಮಕುಂಜ ಗ್ರಾಮಗಳ ಗ್ರಾಮ ದೇವಸ್ಥಾನವಾದ ಶ್ರೀ ರಾಮಕುಂಜೇಶ್ವರ ದೇವಸ್ಥಾನಕ್ಕೆ ‘ ಭಕ್ತಿಯ ನಡಿಗೆ ಶ್ರೀ ರಾಮಕುಂಜೇಶ್ವರನೆಡೆಗೆ ‘ ಪಾದಯಾತ್ರೆ ಜ.11ರಂದು ಬೆಳಿಗ್ಗೆ ನಡೆಯಲಿದೆ.


ಗೋಕುಲನಗರ, ಸಂಪ್ಯಾಡಿ ಶ್ರೀರಾಮ ಅಶ್ವಥ ಕಟ್ಟೆ ಹಾಗೂ ಹಳೆನೇರೆಂಕಿಯಿಂದ ಬೆಳಿಗ್ಗೆ 8 ಗಂಟೆಗೆ ಏಕಕಾಲದಲ್ಲಿ ಪಾದಯಾತ್ರೆ ಆರಂಭಗೊಳ್ಳಲಿದ್ದು, ಕಾಜರೊಕ್ಕುವಿನಲ್ಲಿ ಎಲ್ಲರೂ ಒಟ್ಟು ಸೇರಿ ಶ್ರೀ ಕ್ಷೇತ್ರಕ್ಕೆ ಭಜನೆಯೊಂದಿಗೆ ಪಾದಯಾತ್ರೆ ನಡೆಯಲಿದೆ. ಬಳಿಕ ದೇವಾಲಯದಲ್ಲಿ ಪ್ರದಕ್ಷಿಣೆ ಬಂದು ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿಯ ದರ್ಶನ, ಶ್ರೀ ದೇವರ ತೀರ್ಥಪ್ರಸಾದ ವಿತರಣೆ, ಲಘು ಉಪಹಾರ ನಡೆಯಲಿದೆ. ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಅವರು ತಿಳಿಸಿದ್ದಾರೆ.













