ಘೋಷ್ ಬ್ಯಾಂಡ್ ಸ್ಪರ್ಧೆ : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ‘ಶೇಷಾದ್ರಿ ಘೋಷ್ ಪತಕ ‘ದ್ವಿತೀಯ ಸ್ಥಾನ

0

ಪುತ್ತೂರು: ಕ್ರೀಡಾ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಇವರು ಆಯೋಜಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇವರ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಘೋಷ್ ಬ್ಯಾಂಡ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ‘ಶೇಷಾದ್ರಿ ಘೋಷ್ ಪತಕ ‘ದ್ವಿತೀಯ ಸ್ಥಾನ ಪಡೆದಿದೆ.

ಘೋಷ್ ತಂಡದ ಧನುಷ್ ಡಿಜಿ ಇವರ ನೇತೃತ್ವದಲ್ಲಿ ಸ್ಪರ್ಧೆಯನ್ನು ಎದುರಿಸಲಾಯಿತು. ಸ್ಪರ್ಧೆಯು ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಆಶಾ ಬೆಳ್ಳಾರೆ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ನಳಿನಿ ವಾಗ್ಲೆ, ಘೋಷ್ ಸಂಯೋಜಕರಾದ ಬಿ ವಿಜಯಕುಮಾರ್ ಜೊತೆಗಿದ್ದರು.

LEAVE A REPLY

Please enter your comment!
Please enter your name here