






ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗ್ಯಾಸ್ ಬದಲು ಕಟ್ಟಿಗೆ ಒಲೆಗೆ ಸಿದ್ದತೆ


ಪುತ್ತೂರು: ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಮತ್ತು ಗೃಹ ಬಳಕೆಯ ಅಡುಗೆ ಅನಿಲ ಸರಬರಾಜಿನ ಮೇಲೆ ಪರಿಣಾಮ ಬೀರಿದೆ.ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಅಭಾವದಿಂದ ಹೋಟೆಲ್ಗಳಿಗೆ ಮತ್ತು ದೇವಳಕ್ಕೂ ಸಮಸ್ಯೆಯ ಬಿಸಿ ತಟ್ಟಿದೆ.ಪ್ರತಿ ದಿನ ಸಾವಿರಾರು ಮಂದಿಗೆ ಅನ್ನಪ್ರಸಾದ ನೀಡುತ್ತಿರುವ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗ್ಯಾಸ್ ಬದಲು ಕಟ್ಟಿಗೆ ಒಲೆಯಲ್ಲಿ ಅಡುಗೆ ಪ್ರಾರಂಭ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.



ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಕೊರತೆ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿರುವ ಹೊಟೇಲ್ ಉದ್ಯಮಗಳು ಸಮಸ್ಯೆ ಎದುರಿಸುತ್ತಿದ್ದು,ಮಾ.10ರಂದು ಪುತ್ತೂರಿನ ಕೆಲವು ಸಣ್ಣ ಹೊಟೇಲ್ ಕ್ಯಾಂಟೀನ್ಗಳು ಮಧ್ಯಾಹ್ನದ ಬಳಿಕ ಬಂದ್ ಆಗಿವೆ.ದೊಡ್ಡ ಹೊಟೇಲ್ಗಳಲ್ಲಿ ಮೊದಲೇ ಸಿಲಿಂಡರ್ ಸ್ಟಾಕ್ ಮಾಡಿಟ್ಟಿದ್ದರಿಂದ ಸದ್ಯ ದೊಡ್ಡ ಮಟ್ಟದ ಸಮಸ್ಯೆಯಾಗಿಲ್ಲವಾದರೂ ಪರಿಸ್ಥಿತಿ ಹೀಗೇ ಮುಂದುವರಿದರೆ ಒಂದೆರಡು ದಿನಗಳಲ್ಲಿ ಹೋಟೆಲ್ಗಳನ್ನು ಬಂದ್ ಮಾಡುವ ಪರಿಸ್ಥಿತಿ ಬಂದರೂ ಬರಬಹುದು.ಕಳೆದ ಮೂರು ವಾರಗಳಿಂದ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದೆ.ಅಂದಾಜು ರೂ.1500ಕ್ಕೆ ಸಿಗುತ್ತಿದ್ದ ಸಿಲಿಂಡರ್ ಬೆಲೆ ರೂ.1,750ಕ್ಕೇರಿಕೆಯಾಗಿ ಇದೀಗ ರೂ.1920ಕ್ಕೆ ತಲುಪಿದೆ ಎಂದು ಹೊಟೇಲ್ ಮಾಲಕರು ಹೇಳಿಕೊಂಡಿದ್ದಾರೆ.ಒಂದು ಕಡೆ ಹೊಟೇಲ್ಗಳಿಗೆ ವಾಣಿಜ್ಯ ಸಿಲಿಂಡರ್ ಸಮಸ್ಯೆ ಆದರೆ ಇನ್ನೊಂದು ಕಡೆ ದಿನಂಪ್ರತಿ ಸಾವಿರಾರು ಮಂದಿಗೆ ಅನ್ನಪ್ರಸಾದ ವಿತರಣೆ ಮಾಡುವ ದೇವಳಕ್ಕೂ ಈ ಸಮಸ್ಯೆ ತಟ್ಟಿದೆ.ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆ ಉಂಟಾಗಿದ್ದು ಮಾ.10ರಂದು ಸಿಲಿಂಡರ್ ಪೂರ್ಣ ಖಾಲಿಯಾಗಿರುವುದರಿಂದ ಮಾ.11ರಿಂದ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಲಿದ್ದಾರೆ.ಈಗಾಗಲೇ ದೇವಳದ ಅನ್ನಛತ್ರದ ಹಿಂಬದಿ ಕಳೆದ ಜಾತ್ರೆಯ ಸಂದರ್ಭ ಪಾಕಶಾಲೆ ಮಾಡಿದ ಸ್ಥಳದಲ್ಲಿ ಸುಮಾರು 8ರಿಂದ 9 ಕಟ್ಟಿಗೆ ಒಲೆಗಳನ್ನು ನಿರ್ಮಾಣ ಮಾಡಲಾಗಿದೆ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ನಲ್ಲಿ ಬದಲಾವಣೆ:
ಗ್ಯಾಸ್ ಸಿಲಿಂಡರ್ಗಳ ಅಭಾವದಿಂದಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆಯಾಗಿದ್ದು ಎಲ್ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಕೂಡ ಹೊರಡಿಸಲಾಗಿದೆ. ಗ್ಯಾಸ್ ಸಿಲಿಂಡರ್ಗಳ ಕೃತಕ ಅಭಾವ ಹಾಗೂ ಕಾಳಸಂತೆ ತಡೆಯಲು ಕೇಂದ್ರ ಸರಕಾರ ಈ ಮಾರ್ಗಸೂಚಿ ಹೊರಡಿಸಿದ್ದು ಒಂದು ಸಿಲಿಂಡರ್ ಪಡೆದ ನಂತರ ಮುಂದಿನ ಬುಕ್ಕಿಂಗ್ಗೆ ಕನಿಷ್ಟ 21 ದಿನಗಳಿಂದ 25 ದಿನಗಳ ಕಡ್ಡಾಯ ಅವಧಿಯನ್ನು ವಿಧಿಸಲಾಗಿದೆ. ಡಬಲ್ ಗ್ಯಾಸ್ ಬುಕ್ಕಿಂಗ್ಗಳ ನಡುವಿನ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಏರಿಕೆ ಮಾಡಿದ್ದು ಈಗ ಯುದ್ಧದ ಭೀತಿಯಿಂದ ಜನರು ಕೇವಲ 15 ದಿನಗಳಲ್ಲಿ ಬುಕ್ಕಿಂಗ್ ಮಾಡುತ್ತಿದ್ದು ಇದನ್ನು ನಿಯಂತ್ರಿಸಲು ಪೆಟ್ರೋಲಿಯಂ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ. ಗೃಹ ಬಳಕೆ ಗ್ರಾಹಕರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಿದ್ದು ದೇಶಿಯ ಉತ್ಪಾದನೆ ಹೆಚ್ಚಿಸಲು ಮತ್ತು ಹೊಸ ದೇಶಗಳಿಂದ ಎಲ್ಪಿಜಿ ಆಮದು ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.
ಎಲ್ಪಿಜಿ ಇಂಧನದ ಕೊರತೆಯಿಲ್ಲ-ಕೇಂದ್ರದ ಸ್ಪಷ್ಟನೆ:
ದೇಶದಲ್ಲಿ ಎಲ್ಪಿಜಿ ಇಂಧನದ ಕೊರತೆಯಿಲ್ಲ.ಇಂದು ಉತ್ಪಾದನೆ ಶೇ.10ರಷ್ಟು ಹೆಚ್ಚಾಗಿದ್ದು ಪೂರೈಕೆ ಸ್ಥಿರವಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ತೈಲ ಶುದ್ಧೀಕರಣ ಘಟಕಗಳು ಸರಕಾರದ ಸೂಚನೆಗಳ ನಂತರ ಎಲ್ಪಿಜಿ ಉತ್ಪಾದನೆಯನ್ನು ಸುಮಾರು 10ಶೇ.ಹೆಚ್ಚಿಸಿವೆ.ಜೊತೆಗೆ ಸಂಗ್ರಹಣೆ ಹಾಗೂ ಅಕ್ರಮಗಳನ್ನು ತಡೆಯಲು ಹೆಚ್ಚುವರಿ ಆಡಳಿತಾತ್ಮಕ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅಽಕಾರಿಗಳು ತಿಳಿಸಿದ್ದಾರೆ.ಎಲ್ಪಿಜಿ ವಿತರಣೆಯಲ್ಲಿ ಅಕ್ರಮಗಳನ್ನು ತಡೆಯಲು ಹಾಗೂ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಲು ಅಧಿಕಾರಿಗಳು ಮೇಲ್ವಿಚಾರಣೆ ಅವಽಯನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಿದ್ದಾರೆ.ಸಂಗ್ರಹಣೆಯನ್ನು ತಡೆಯಲು ಮತ್ತು ಸುಗಮ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರಕಾರ ಅಗತ್ಯ ಸರಕುಗಳ ಕಾಯ್ದೆಯಡಿಯಲ್ಲಿ ನಿಬಂಧನೆಗಳನ್ನು ಜಾರಿಗೊಳಿಸಿದೆ.ತಾತ್ಕಾಲಿಕ ಸಮಸ್ಯೆ ಇತ್ತು,ಆದರೆ ಈಗ ಸಮಸ್ಯೆಯನ್ನು ಪರಿಹರಿಸಲಾಗಿದೆ.ಎಲ್ಲಾ ಸಂಸ್ಕರಣಾಗಾರಗಳು ಪ್ರಸ್ತುತ ಸರಬರಾಜುಗಳನ್ನು ನಿರ್ವಹಿಸಲು 100ಶೇ.ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಽಕಾರಿಗಳು ತಿಳಿಸಿದ್ದಾರೆ.ದೇಶದಲ್ಲಿ ಸಾಕಷ್ಟು ಇಂಧನ ಸಂಪನ್ಮೂಲಗಳು ಲಭ್ಯವಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಯನ್ನು ನಂಬಬಾರದು ಎಂದು ಸರಕಾರ ಸಾರ್ವಜನಿಕರಿಗೆ ಮನವಿ ಮಾಡಿದೆ.ಇಂತಹ ತಪ್ಪು ಮಾಹಿತಿ ಅನಗತ್ಯ ಆತಂಕವನ್ನು ಸೃಷ್ಟಿಸಬಹುದು ಎಂದು ಅಽಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನೈಸರ್ಗಿಕ ಅನಿಲ ಪೂರೈಕೆ ನಿಯಂತ್ರಣಕ್ಕೆ ಅಗತ್ಯ ಸರಕುಗಳ ಕಾಯ್ದೆ ಜಾರಿಗೆ:
ದೇಶದಲ್ಲಿ ಎಲ್ಪಿಜಿ ಕೊರತೆ ಬಗ್ಗೆ ಆತಂಕ ಹೆಚ್ಚುತ್ತಿರುವ ಹಾಗೂ ಹೋಟೆಲ್ ಸಂಘಗಳು ಎಲ್ಪಿಜಿ ಪೂರೈಕೆಯನ್ನು ನಿಯಂತ್ರಿಸುವಂತೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಂಗಳವಾರ 1955ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದಿದೆ.
ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ನೈಸರ್ಗಿಕ ಅನಿಲದ ಲಭ್ಯತೆ, ಪೂರೈಕೆ ಮತ್ತು ಸಮಾನ ವಿತರಣೆಯನ್ನು ನಿಯಂತ್ರಿಸಲು ಈ ಸಂಬಂಧ ಅಽಸೂಚನೆ ಹೊರಡಿಸಲಾಗಿದೆ.ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಉತ್ಪಾದನೆಯನ್ನು ಗರಿಷ್ಠಗೊಳಿಸಲು ಮತ್ತು ಪ್ರಮುಖ ಹೈಡ್ರೋಕಾರ್ಬನ್ ಹರಿವುಗಳನ್ನು ಎಲ್ಪಿಜಿ ಪೂಲ್ಗೆ ತಿರುಗಿಸಲು ಸಂಸ್ಕರಣಾಗಾರಗಳು ಹಾಗೂ ಪೆಟ್ರೋಕೆಮಿಕಲ್ ಘಟಕಗಳಿಗೆ ಸರಕಾರ ನಿರ್ದೇಶನ ನೀಡಿದೆ.
ಪುತ್ತೂರು ಫುಡ್ ಫೆಸ್ಟ್ ಮುಂದೂಡಿಕೆ :
ಗ್ಯಾಸ್ ಸಿಲಿಂಡರ್ ಅಭಾವದ ಹಿನ್ನೆಲೆಯಲ್ಲಿ ಅನಿವಾರ್ಯ ಕಾರಣಗಳಿಂದ ಈ ಬಾರಿಯ ಪುತ್ತೂರು ಫುಡ್ ಫೆಸ್ಟ್ ಮುಂಡೂಡಲಾಗಿದೆ.ಹೊಸ ದಿನಾಂಕ ತಿಳಿಸಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ವೈರಲ್ ಆಗಿದೆ.
ಭಕ್ತರಿಗೆ ಅನ್ನಪ್ರಸಾದ ವಿತರಣೆಯಲ್ಲಿ ತೊಂದರೆ ಆಗದಂತೆ ಕ್ರಮ
ಪ್ರತಿ ನಿತ್ಯ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ದೇವಳದಲ್ಲಿ ನಡೆಯುತ್ತಿದೆ.ಸೋಮವಾರ ಸುಮಾರು ಮೂರೂವರೆ ಕ್ವಿಂಟಾಲ್ ಅಕ್ಕಿ ಬೇಯಿಸುತ್ತೇವೆ.ಒಟ್ಟು ಅಡುಗೆಗೆ 5 ಸಿಲಿಂಡರ್ ಬೇಕಾಗುತ್ತದೆ.ಇದೀಗ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದಾಗಿ ವಾಣಿಜ್ಯ ಸಿಲಿಂಡರ್ ನಮ್ಮಲ್ಲಿ ಖಾಲಿ ಆಗಿದೆ.ತಕ್ಷಣದ ಬದಲಿ ವ್ಯವಸ್ಥೆಗೆ ಕೊಂಕಣ್ ಗ್ಯಾಸ್ನಿಂದ 10 ಸಿಲಿಂಡರ್ ತರಿಸಿದ್ದೇವೆ. ಆದರೆ ದರ ಹೆಚ್ಚಾಗುತ್ತದೆ.ಎಲ್ಪಿಜಿ ವಾಣಿಜ್ಯ ಸಿಲಿಂಡರ್ 19 ಕೆ.ಜಿ 1,7೦೦ಕ್ಕೆ ಬಂದರೆ ಕೊಂಕಣ್ ಗ್ಯಾಸ್ 17 ಕೆ.ಜಿ. ರೂ.2,4೦೦ ಆಗುತ್ತದೆ.ಇದು ದೇವಳಕ್ಕೆ ಹೊರೆಯಾಗುವ ಹಿನ್ನೆಲೆಯಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ನಿರ್ಧಾರಕ್ಕೆ ಬಂದಿದ್ದು,ಈಗಾಗಲೇ ಕಟ್ಟಿಗೆ ಒಲೆಯನ್ನು ಸಿದ್ಧಪಡಿಸಿ ಆಗಿದೆ.ನಾಳೆಯೇ ಒಂದುಲೋಡ್ ಕಟ್ಟಿಗೆ ಬರಲಿದೆ.ಭಕ್ತರಿಗೆ ಅನ್ನಪ್ರಸಾದ ವಿತರಣೆಯಲ್ಲಿ ಯಾವುದೇ ತೊಂದರೆ ಆಗದಂತೆ ಮಹಾಲಿಂಗೇಶ್ವರ ದೇವರು ಆಶೀರ್ವಾದ ನೀಡುತ್ತಾರೆ-
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು
ಆತಂಕ ಬೇಡ, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ಗಳಿಗೆ ತೊಂದರೆಯಾಗಿಲ್ಲ…
ವಾಣಿಜ್ಯ ಬಳಕೆಯ ಸಿಲಿಂಡರ್ಗಳಿಗಿಂತ ಮನೆ ಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡಲಾಗಿದ್ದು ಒಂದಷ್ಟು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಪೂರೈಕೆ ಸರಿಯಾಗಲಿದೆ. ಗೃಹ ಬಳಕೆಯ ಸಿಲಿಂಡರ್ಗಳು ಬೇಕಾದಷ್ಟು ಸ್ಟಾಕ್ ಇದೆ. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ ಎಂದುಕೊಂಡು ಗ್ರಾಹಕರು ಸಮರೋಪಾದಿಯಲ್ಲಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಸರ್ವರ್ ಡೌನ್ ಆಗಿ ತೊಂದರೆಯಾಗಿದೆ. ಯಾವುದೇ ಆತಂಕ ಬೇಡ.
ಬೂಡಿಯಾರ್ ರಾಧಾಕೃಷ್ಣ ರೈ,
ಬೂಡಿಯಾರ್ ಇಂಡೇನ್ ಗ್ಯಾಸ್ ಏಜೆನ್ಸಿ ಕುಂಬ್ರ
ದೊಡ್ಡ ಪ್ರಮಾಣದ ರೆಸ್ಟೋರೆಂಟ್ಗಳಿಗೆ ದಿನಕ್ಕೆ 2 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳು ಬೇಕಾಗುತ್ತದೆ. ಸಣ್ಣ ಪ್ರಮಾಣದ ಕ್ಯಾಂಟೀನ್ಗಳಿಗೆ 1 ಸಾಕಾಗುತ್ತದೆ. ಇದೀಗ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ನ ಅಭಾವದಿಂದಾಗಿ ಹೋಟೆಲ್ ನಡೆಸುವುದು ಕಷ್ಟಕರವಾಗಿದೆ. ಇದೇ ರೀತಿ ಮುಂದುವರಿದರೆ ಮುಂದೆ ಬಹಳಷ್ಟು ತೊಂದರೆ ಇದೆ.
ರಫೀಕ್ ಅಲ್ರಾಯ, ಹೋಟೆಲ್ ಉದ್ಯಮಿ ಕುಂಬ್ರ










