ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿಗೆ ಗೊನೆ ಮುಹೂರ್ತ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಬಳಿಕ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯುವ (ಏ.28) ವರ್ಷಾವಧಿ ನೇಮ ನಡಾವಳಿಗೆ ಏ.20ರಂದು ಬೆಳಗ್ಗೆ ಗೊನೆ ಮುಹೂರ್ತ ನಡೆಯಿತು.


ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಅವರು ದೈವಸ್ಥಾನದ ಭಂಡಾರದ ಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಸಂಪ್ರದಾಯದಂತೆ ವಾದ್ಯದೊಂದಿಗೆ ಕಾಲು ದಾರಿಯಲ್ಲಿ ತೆರಳಿ ತೋಟವೊಂದರಲ್ಲಿ ಗೊನೆ ಮುಹೂರ್ತ ಮಾಡಲಾಯಿತು.

ಎರಡು ಗೊನೆಗಳಿಗೆ ಮುಹೂರ್ತ ನಡೆಸಿದ ಬಳಿಕ ಅದನ್ನು ದೈವಸ್ಥಾನಕ್ಕೆ ತಂದು ಆರತಿ ಬೆಳಗಿ ಮುಂದೆ ನಡೆಯುವ ನೇಮೋತ್ಸವವು ಯಾವುದೇ ವಿಘ್ನವಿಲ್ಲದಂತೆ ಮತ್ತು ಭಕ್ತರಿಗೆ ಆಶೀರ್ವಾದವನ್ನು ನೀಡುವಂತೆ ಅರ್ಚಕರು ಪ್ರಾರ್ಥನೆ ಮಾಡಿದರು.

ದೈವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಬಿರ್ಮರಕೋಡಿ, ಕಾರ್ಯದರ್ಶಿ ನವೀನ ಕರ್ಕೇರ ರಾಂಬೈಲು, ಸದಸ್ಯರಾದ ಜಿನ್ನಪ್ಪ ಗೌಡ ಕಾಂತಿಲ, ಸತೀಶ ನಾಯ್ಕ ಕಾನದಗುರಿ, ಗಂಗಾಧರ ಗೌಡ ಓಟೆ, ಆನಂದ ಸುವರ್ಣ ಬಪ್ಪಳಿಗೆ, ಕರುಣಾಕರ ಕರ್ಕೇರ ರಾಂಬೈಲು, ಕಿರಣ್ ಕುಮಾರ್ ಬಸಂತಕೋಡಿ, ವಿಶ್ವನಾಥ ಗೌಡ ಸೇನರಮೂಲೆ, ರುಕ್ಮಯ ಕುಲಾಲ್ ಸುಂಕಮೂಲೆ, ಗಂಗಾಧರ ನಾಯ್ಕ ಕಬ್ಬಿನಹಿತ್ಲು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮಾಧವ ಗೌಡ ಕಾಂತಿಲ, ಮಾಜಿ ಸದಸ್ಯರಾದ ಚಿದಾನಂದ ಬೈಲಾಡಿ, ಕಿರಣ್ ರೈ, ಅಶೋಕ್ ನಾಯ್ಕ್, ನಾರಾಯಣ ಪೂಜಾರಿ ನೆಕ್ಕರೆ, ಭೋಜರಾಜ ಗೌಡ, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಮತ್ತು ದೈವದ ಚಾಕ್ರಿ ಮಾಡುವವರು ಮತ್ತಿತರರು ಉಪಸ್ಥಿತರಿದ್ದರು. ದೈವಸ್ಥಾನದ ಕಚೇರಿ ಮೇನೇಜರ್ ಚಂದ್ರಶೇಖರ್ ಭಟ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಏ.28ರಂದು ನೇಮ ನಡಾವಳಿ ನಡೆಯಲಿದೆ.

LEAVE A REPLY

Please enter your comment!
Please enter your name here