ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಳೆನೇರೆಂಕಿ ಶಾಖಾ ಕಛೇರಿ ಲೋಕರ್ಪಣೆ-ಹಳೆನೇರೆಂಕಿ ಕಟ್ಟಡ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಕುಟವಿದ್ದಂತೆ- ಶಶಿಕುಮಾರ್ ರೈ ಬಾಲ್ಯೋಟ್ಟು

0

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಳೆನೇರೆಂಕಿ ನೂತನ ಶಾಖಾ ಕಛೇರಿ ಲೋಕಾರ್ಪಣೆ ಮೇ.21 ರಂದು ಗುರುವಾರ ಪೂರ್ವಾಹ್ನ ಗಂಟೆ 9:30 ಕ್ಕೆ ಲೋಕರ್ಪಣೆಗೊಂಡಿತ್ತು.

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಶ್ರೀ ಶಶಿಕುಮಾರ್ ಬಾಲ್ಯೋಟ್ಟುರವರು ದೀಪ ಪ್ರಜ್ವಲನೆ ಗೊಳಿಸಿ ನಂತರ ಲೋಕಾರ್ಪಣೆಗೊಳಿಸಿ ಮಾತನಾಡಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೇಂದ್ರ ಸಹಕಾರಿ ಬ್ಯಾಂಕ್, ಅಪೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿ ಪಡೆದು ಖ್ಯಾತಿ ಪಡೆದ ಸಂಘವಾಗಿದ್ದು ಹಳೆನೇರೆಂಕಿ ಕಟ್ಟಡ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಕುಟವಿದ್ದಂತೆ ಇದೆ ಇದರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆ ಎಂದು ತಿಳಿಸಿ ರಮೇಶ ಭಟ್ ಉಪ್ಪಂಗಳ ರವರು ಸರಕಾರ,ಎಸ್.ಡಿ.ಸಿ.ಸಿ ಬ್ಯಾಂಕ್ ನ ಅನುದಾನಗಳನ್ನು ಪಡೆದು ಸಹಕಾರಿ ಸಂಸ್ಥೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಳೆನೇರೆಂಕಿ ಶಾಖೆ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ತಿಳಿಸಿ ಶುಭಹಾರೈಸಿದರು.


ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ ರವರು ಮಾತನಾಡಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಳೆನೇರೆಂಕಿ ಶಾಖೆ ಲೋಕಾರ್ಪಣೆಗೊಂಡಿರುವುದು ಸಂತಸದ ವಿಚಾರವಾಗಿದ್ದು ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಗೆಲ್ಲಿಸುವ ಮನೋಭಾವ ಹೊಂದಿದ್ದು ಸಹಕಾರಿ ಕ್ಷೇತ್ರ ಅಭಿವೃದ್ಧಿಗೊಳ್ಳವುದರ ಜೊತೆಗೆ ನಾವು ಕೂಡ ಅಭಿವೃದ್ಧಿ ಪಥದಲ್ಲಿ ಸಾಗುವ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ರಮೇಶ ಭಟ್ ಉಪ್ಪಂಗಳ ರವರು ಮಾತನಾಡಿ ಹಳೆನೇರೆಂಕಿ ಶಾಖೆ ಪ್ರಾರಂಭ ಮಾಡಬೇಕೆಂದು ಸಂಘದ ಮಹಾಸಭೆಯಲ್ಲಿ ಸಂಘದ ಸದಸ್ಯರು ಆಗ್ರಹಿಸುತ್ತಿದ್ದರು. ಆದರೆ ಜಾಗದ ಸಮಸ್ಯೆಯಿಂದಾಗಿ ಸಾಧ್ಯವಾಗಿರಲಿಲ್ಲ ಹಿಂದಿನ ಅಡಳಿತ ಮಂಡಳಿ ದೈವ ದೇವರುಗಳ ಅನುಗ್ರಹದಿಂದ ಜಾಗ ಖರೀದಿ ಮಾಡಿ ಕಟ್ಟಡ ನಿರ್ಮಾಣ ಮಾಡಿ ನಂತರ ಪ್ರಸಕ್ತ ಅಡಳಿತ ಮಂಡಳಿ ಶಾಖೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿ ಹಳೆನೇರೆಂಕಿ ಶಾಖೆಯನ್ನು ಇಂದು ಲೋಕರ್ಪಣೆ ಮಾಡಿದ್ದೇವೆ. ಇಲ್ಲಿ ಸಹಕಾರಿ ಸೇವೆಗಳು,ರಸಗೊಬ್ಬರ ಸೇವೆ ಸೇರಿದಂತೆ ಹೊಸ ವ್ಯವಹಾರ ಪ್ರಾರಂಭ ಮಾಡುವ ಬಗ್ಗೆ ಅಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿ ಹಳೆನೇರೆಂಕಿ ಶಾಖೆ ಲಾಭದಾಯಕದತ್ತ ನಡೆಯಲು ಎಲ್ಲಾರು ಸಹಕರಿಸುವಂತೆ ವಿನಂತಿಸಿದರು.ಸಂಘದ ಉಪಾಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್.ಡಿ ವಂದನಾರ್ಪಣೆ ಸಲ್ಲಿಸಿದರು.ಶಾಖಾ ವ್ಯವಸ್ಥಾಪಕರಾದ ಲೋಕನಾಥ ರೈ ಕೇಲ್ಕ ಕಾರ್ಯಕ್ರಮ ನಿರೂಪಿಸಿ ದರು,ಸಂಘದ ಸದಸ್ಯರಾದ ವೀರೇಂದ್ರ ಪಾಲೆದಡ್ಡ ಪ್ರಾರ್ಥಿಸಿದರು.


ಕಾರ್ಯಕ್ರಮದಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಧರ್ಮಪಾಲ ರಾವ್ ಕಜೆ, ಮಾಜಿಉಪಾಧ್ಯಕ್ಷರಾದ ರಮೇಶ ಎನ್.ಸಿ,ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಗೌಡ ಪಜ್ಜಡ್ಕ, ಪ್ರಶಾಂತ ರೈ ಮನವಳಿಕೆ,ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಸಂಘದ ನಿರ್ದೇಶಕರಾದ ಕೇಶವ ಗೌಡ, ಉದಯ ಎಸ್ ಸಾಲಿಯಾನ್, ಅಶೋಕ ಕೆ, ಗಾಯತ್ರಿ,ರತ್ನ ಬಿ.ಕೆ, ವಿಜಯ ಎಸ್, ಅಶೋಕ ಎಚ್,ಲೋಕೇಶ್, ಡಿ.ಸಿ.ಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್.ಡಿ ಆಲಂಕಾರು ಎಸ್.ಡಿ.ಸಿ.ಸಿ ಬ್ಯಾಂಕ್ ನ ಮ್ಯಾನೇಜರ್ ದೀಪಾ ರವರು ಸೇರಿದಂತೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರುಗಳು ಹಾಗೂ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here