







ಪುತ್ತೂರು: ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮೇ 28 ರಂದು ರಾತ್ರಿ ಬಜಗೋಳಿ ಶ್ರೀ ಉಳ್ಳಾಲ್ತಿ ನಿವಾಸದ ಲೀಲಾವತಿ ಮತ್ತು ವಾಸಪ್ಪ ಗೌಡ, ಭರತ್, ಶರತ್ ಕುಟುಂಬಸ್ಥರಿಂದ ಸೇವಾರ್ಥವಾಗಿ ಹರಕೆಯ ನೇಮೋತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಕರಿಗಂಧ ಪ್ರಸಾದವನ್ನು ಸ್ವೀಕರಿಸುವಂತೆ ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.











