






ಪುತ್ತೂರು: ಶಾಸಕ ಅಶೋಕ್ ರೈಯವರಿಗೆ ಸಚಿವ ಸ್ಥಾನ ಸಿಗಲು ನೆಟ್ಟಣಿ ಮುಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಈಶ್ವರಮಂಗಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಮೂಸಾನ್ ಹಾಜಿ, ಪುತ್ತೂರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀರಾಮ್ ಪಕ್ಕಳ, ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ರಮ್ ರೈ ಸಾಂತ್ಯ, ನೆ.ಮುಡ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ರಾಮ ಮೇನಾಲ,ಮೇನಾಲ ಬೂತ್ ಅಧ್ಯಕ್ಷ ಅಬ್ಬುಲ್ ಲತೀಫ್ ಮೇನಾಲ, ಅಬ್ದುಲ್ಲ ಮೆಣಸಿನಕಾನ, ಈಶ್ವರಮಂಗಲ ಬೂತ್ ಅಧ್ಯಕ್ಷ ಅಬ್ದುಲ್ ಸಲಾಮ್ ಹಾಗೂ ರಝಾಕ್ ಮೇನಾಲ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.













