






ಪುತ್ತೂರು : ಬನ್ನೂರು ಕೃಷ್ಣನಗರ ಸಮೀಪದ ಅಲುಂಬಡದಲ್ಲಿರುವ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕೀಬೋರ್ಡ್ ತರಗತಿಗೆ ಚಾಲನೆ ನೀಡಲಾಯಿತು.


ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅಧ್ಯಕ್ಷತೆ ವಹಿಸಿ ತರಗತಿಯನ್ನು ಉದ್ಘಾಟಸಿ ಮಾತನಾಡಿ ಕಲೆಗಳು ನಾನಾ ಪ್ರಕಾರಗಳಲ್ಲಿ ಇರುತ್ತದೆ ಮತ್ತು ಅದು ಮಾನವನಿಗೆ ಅತ್ಯಂತ ಸಮಾಧಾನ ಹಾಗು ಸಂತೋಷವನ್ನು ನೀಡುತ್ತದೆ. ಅಂತಹ ಕಲೆಗಳಲ್ಲಿ ಕೀಬೋರ್ಡ್ ವಾದನ ಸಹ ಒಂದು. ಇದನ್ನು ಮಕ್ಕಳು ಎಳವೇಯಿಂದಲೇ ಕಲಿತು ಅಭ್ಯಾಸ ಮಾಡಿದರೆ ಅವರ ಸರ್ವಾಂಗೀಣ ಪ್ರಗತಿಗೆ ಸಹಕಾರಿ ಎಂದರು.



ಕೀಬೋರ್ಡ್ ತರಬೇತುದಾರರಾದ ಕಲಾವಿದ ಬಾಬಣ್ಣ ಅವರು ಮಾತಾನಾಡಿ ಕಲಿಕೆಯ ವಿಧಾನ ಮತ್ತು ಪ್ರಯೋಜನ ತಿಳಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹಾಗು ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷ ಉಮೇಶ್ ಮಲುಮೇಳು, ಮುಖೋಪಾಧ್ಯಾಯ ಅಮರನಾಥ್ ಪಟ್ಟೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸೌಮ್ಯಶೀ ಹೆಗ್ಡೆ ಮೈಸೂರಿನ ಸರಕಾರಿ ವಕೀಲ ಜನಾರ್ದನ ಮುತಾಂದವರು ಉಪಸ್ಥಿತರಿದ್ದರು.
ಬಾಬಣ್ಣ, ಜನಾರ್ದನ ಹಾಗು ಕುಮಾರಿ ಸೋನಿಕಾ ಇವರಿಂದ ಸಂಗೀತದ ಪ್ರಾತ್ಯಕ್ಷಿಕೆ ನಡೆಯಿತು. ವಿದ್ಯಾರ್ಥಿನಿಯರಾದ ಆಧ್ಯಾ, ಯುಕ್ತ ಮತ್ತು ಹರ್ಷಿತಾ ಪ್ರಾರ್ಥಿಸಿದರು. ಶಿಕ್ಷಕಿಯರಾದ ಕು ಸುನಯನ ಸ್ವಾಗತಿಸಿ, ಪ್ರಮೀಳಾ ಅತಿಥಿಗಳ ಪರಿಚಯ ಮಾಡಿದರು. ಅಕ್ಷತಾ ವಂದಿಸಿದರು. ಸುಚಿತಾ ಕಾರ್ಯಕ್ರಮ ನಿರೂಪಿಸಿದರು.










