






ಪುತ್ತೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಇವರು 2025-26ನೇ ಸಾಲಿನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಎನ್.ಎಮ್.ಎಮ್.ಎಸ್ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ನೇಹಾ ಎಂ.ಡಿ (ಡೊಂಬಯ್ಯ ಬಿ ಮತ್ತು ಲಲಿತಾ ಎಂ.ಡಿ. ದಂಪತಿ ಪುತ್ರಿ), ಖದೀಜ ರಿಮ್‌ಶ (ಉಸ್ಮಾನ್ ಪಟ್ಟತೋಟ ಮತ್ತು ಶಮೀಮ ದಂಪತಿ ಪುತ್ರಿ), ಕೃತಿ (ಅಶೋಕ್ ಸಪಲ್ಯ ಮತ್ತು ಸವಿತ ದಂಪತಿ ಪುತ್ರಿ)ರವರು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.















