ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ SPYSS ಯೋಗ ಶಿಕ್ಷಣ ಸಮಿತಿ ಹಾಗೂ Yi ಮಂಗಳೂರು ವತಿಯಿಂದ ಯೋಗ ದಿನಾಚರಣೆ

0

“ಯೋಗವು ಒಂದು ಕಾರ್ಯಕ್ರಮವಾಗದೆ ಒಂದು ಜೀವನ ಕ್ರಮವಾಗಬೇಕು”:- ಯೋಗ ಶಿಕ್ಷಕ , ಹೇಮಚಂದ್ರ ಕಲ್ಲೇಗ

ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ Young Indian’s Mangaluru ಇದರ ಸಹಯೋಗದೊಂದಿಗೆ 12 ನೇ ವರ್ಷದ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ವಿದ್ಯಾರ್ಥಿಗಳೊಂದಿಗೆ ನಡೆಸಲಾಯಿತು.

ಪತಂಜಲಿ ಯೋಗ ಶಿಕ್ಷಣ ತರಬೇತಿ ಕೇಂದ್ರದ ಯೋಗ ಶಿಕ್ಷಕರಾದ ಹೇಮಚಂದ್ರ ಕಲ್ಲೇಗ ಇವರು ಮಾತನಾಡುತ್ತಾ ಯೋಗವು ಶರೀರ ಮತ್ತು ಮನಸ್ಸನ್ನು ಸ್ವಾಸ್ಥ್ಯಗೊಳಿಸುವುದು. ಈ ಯೋಗವು ಒಂದು ದಿನದ ಕಾರ್ಯಕ್ರಮವಾಗದೆ ಒಂದು ಜೀವನ ಕ್ರಮವಾಗಬೇಕು ಎಂದು ಹೇಳಿದರು. ಯೋಗ ಶಿಕ್ಷಕರಾದ ಜ್ಞಾನೇಶ್ ವಿಶ್ವಕರ್ಮ, ಜಯರಾಮ್, ಅನಿತಾ, ಜೈ ಪ್ರಸಾದ್, ರವಿಶಂಕರ, ಸುಜಾತ ಇವರು ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ Yi Mangalore ನ Health Vertical Chair ಡಾ. ಮೇಘ ಗೋಕುಲ್, ಸಂಚಾಲಕ ಗೋಕುಲ್‌ನಾಥ್ ಪಿ.ವಿ., ಪ್ರಾಂಶುಪಾಲೆ ಹೇಮಲತಾ ಗೊಕುಲ್‌ನಾಥ್, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here