ವಿವೇಕಾನಂದ ಯುವಕ ವೃಂದದ ವತಿಯಿಂದ 12 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಯೋಗ ತರಗತಿ

0

ಅರಿಯಡ್ಕ:ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೇ ಭಾರತ್ ದಕ್ಷಿಣ ಕನ್ನಡ ಹಾಗೂ ತಾಲೂಕು ಯುವಜನ ಒಕ್ಕೂಟ (ರಿ.) ಪುತ್ತೂರು ಮತ್ತು ಶ್ರೀ ಕೃಷ್ಣ ಭಜನಾ ಮಂದಿರ ( ರಿ.) ಕೌಡಿಚ್ಚಾರು ಇವುಗಳ ಸಹಯೋಗದೊಂದಿಗೆ ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ವಿವೇಕಾನಂದ ಯುವಕ ವೃಂದ (ರಿ.) ಕೌಡಿಚ್ಚಾರು ಅರಿಯಡ್ಕ ಇದರ ಆಶ್ರಯದಲ್ಲಿ 12 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ21 ರಂದು ಶ್ರೀ ಕೃಷ್ಣ ಭಜನಾ ಮಂದಿರದ ವಾಸುದೇವ ಸಭಾಭವನದಲ್ಲಿ ನಡೆಯಿತು.


ಈ ಕಾರ್ಯಕ್ರಮವನ್ನು ಶ್ರೀ ಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾದ ತಿಲಕ್ ರೈ ಕುತ್ಯಾಡಿ ದೀಪಬೆಳಗಿಸಿ ಚಾಲನೆ ನೀಡಿದರು, ಮುಖ್ಯ ಅತಿಥಿಗಳಾಗಿ ನಿವೃತ ಪಾಣಾಜೆ ವಲಯ ಅರಣ್ಯ ವೀಕ್ಷಕರಾದ ದೇವಪ್ಪ ನಾಯ್ಕ ಹೊಸಗದ್ದೆ, ಶ್ರೀ ಕೃಷ್ಣ ಭಜನಾ ಮಂದಿರ ಆಡಳಿತ ಸಮಿತಿಯ ಗೌರವಾಧ್ಯಕ್ಷ, ರಾಮದಾಸ ರೈ ಮಧ್ಲ, ಉಪಸ್ಥಿತರಿದ್ದು ಶುಭಹಾರೈಸಿದರು , ಯೋಗ ತರಬೇತುದಾರರಿಗೆ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ, ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಯೋಗ ಗುರುಗಳಾದ ನವೀನ್ ಕುಮಾರ್ ಸಹಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ವೃಂದದ ಅಧ್ಯಕ್ಷರಾದ ಉದಯ ಆಕಾಯಿ ರವರು ವಹಿಸಿದರು.


ಅಪ್ಪಯ್ಯ ನಾಯ್ಕ ಬಪ್ಪಪುಂಡೇಲು, ವಸಂತ ಕುಲಾಲ್ ಆಕಾಯಿ, ಸುಕುಮಾರ ಕರ್ಕೇರ ಮಡ್ಯಂಗಳ, ಸಂತೋಷ್ ಕುಮಾರ್ ಕುತ್ಯಾಡಿ, ಸುಶಾಂತ್ ರೈ ಕುತ್ಯಾಡಿ, ಅತಿಥಿಗಳನ್ನು ಹೂ ಗುಚ್ಛ ನೀಡಿ ಸ್ವಾಗತಿಸಿದರು.
ಸಭೆಯ ಮುನ್ನ ಯೋಗ ತರಗತಿ ನಡೆಯಿತು.

ಈ ಸಂದರ್ಭದಲ್ಲಿ ಯುವಕ ವೃಂದದ ಸದಸ್ಯರು, ಭಜನಾ ಮಂದಿರದ ಸಮಿತಿಯ ಸದಸ್ಯರು ಹಾಗೂ ಧರ್ಮ ಶಿಕ್ಷಣದ ಶಿಕ್ಷಣಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ದೀಪಕ್ ಕುಲಾಲ್ ಪ್ರಾರ್ಥಿಸಿ, ಬಾಲಕೃಷ್ಣ ಕುಲಾಲ್ ಸ್ವಾಗತಿಸಿದರು.ದುರ್ಗಪ್ರಸಾದ್ ಕುತ್ಯಾಡಿ ವಂದಿಸಿ, ಚರಣ್ ಎಂ.ಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here