ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ

0

ಅಧ್ಯಕ್ಷ; ರಾಜೀವ ಪಿ., ಉಪಾಧ್ಯಕ್ಷ; ಯಶ್ ರೈ, ಕಾರ್ಯದರ್ಶಿ-ಲಿಶಾ ಶೆಟ್ಟಿ
ಕ್ರೀಡಾ ಕಾರ್ಯದರ್ಶಿಗಳಾಗಿ ಹರ್ಷಿತಾ ಜಿ., ಗಗನ್ ವಿ.ಕೆ.
ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶ್ರೇಯಾ ಶೆಟ್ಟಿ, ಆದಿತ್ಯ
ಎನ್‌ಎಸ್‌ಎಸ್ ಘಟಕದ ನಾಯಕ-ಪ್ರೀತಂ, ನಾಯಕಿ-ಪ್ರೈಶಿಕ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ೨೦೨೬ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷನಾಗಿ ದ್ವಿತೀಯ ಪಿಯುಸಿ ಎಸ್‌ಇಬಿಎ ತರಗತಿಯ ರಾಜೀವ ಪಿ., ಉಪಾಧ್ಯಕ್ಷನಾಗಿ ಪ್ರಥಮ ಪಿಯುಸಿ ಸಿಇಬಿಎ ತರಗತಿಯ ಯಶ್ ರೈ, ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ಎಸ್‌ಇಬಿಎ ತರಗತಿಯ ಲಿಶಾ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಗಳಾಗಿ ದ್ವಿತೀಯ ಪಿಯುಸಿ ಎಸ್‌ಇಬಿಎ ತರಗತಿಯ ಹರ್ಷಿತಾ ಜಿ ಮತ್ತು ದ್ವಿತೀಯ ಪಿಯುಸಿ ಸಿಇಬಿಎ ತರಗತಿಯ ಗಗನ್ ವಿ.ಕೆ., ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ದ್ವಿತೀಯ ಪಿಯುಸಿ ಎಸ್‌ಇಬಿಎ ತರಗತಿಯ ಶ್ರೇಯಾ ಶೆಟ್ಟಿ ಮತ್ತು ದ್ವಿತೀಯ ಪಿಯುಸಿ ಸಿಇಬಿಎ ತರಗತಿಯ ಆದಿತ್ಯ ಆಯ್ಕೆಯಾದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕನಾಗಿ ದ್ವಿತೀಯ ಪಿಯುಸಿ ಸಿಇಬಿಎ ತರಗತಿಯ ಪ್ರೀತಂ ಮತ್ತು ನಾಯಕಿಯಾಗಿ ದ್ವಿತೀಯ ಪಿಯುಸಿ ಎಸ್‌ಇಬಿಎ ತರಗತಿಯ ಪ್ರೈಶಿಕ ಇವರನ್ನು ಆರಿಸಲಾಯಿತು. ಚುನಾವಣಾ ಪ್ರಕ್ರಿಯೆಯನ್ನು ರಾಜ್ಯಶಾಸ್ತ್ರ ಉಪನ್ಯಾಸಕರಾದ ದಾಮೋದರ್ ಎನ್ ಮತ್ತು ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಇವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು. ಚುನಾವಣಾ ಅಧಿಕಾರಿಗಳಾದ ಚೇತನ್ ಎಂ.ಮತ್ತು ತನುಜಾ ಇವರು ಕಾರ್ಯಕ್ರಮ ಸಂಯೋಜಿಸಿದರು. ಉಪನ್ಯಾಸಕರಾದ ಗಣೇಶ್, ಲೋಹಿತ್, ಕೀರ್ತನ್, ತಿಲಕಾಕ್ಷ ಮತ್ತು ಸಿಬ್ಬಂದಿ ಹರಿಪ್ರಸಾದ್ ಸಹಕರಿಸಿದರು.

LEAVE A REPLY

Please enter your comment!
Please enter your name here