






ಕಾಣಿಯೂರು: ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿರುವ ಮುಂಬೈ ಕಲ್ಯಾಣ್ ಓಂ ಶಕ್ತಿ ಮಹಿಳಾ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಜು 1ರಂದು ಶಾಲೆಯಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್ ವಹಿಸಿದ್ದರು. ಮುಂಬೈ ಕಲ್ಯಾಣ್ ಓಂ ಶಕ್ತಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳನ್ನು ಶಾಲು, ಸ್ಮರಣಿಕೆ, ಫಲವಸ್ತು ನೀಡಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕ ಸಂಜೀವ ರೈ ಪೈಕ ಶುಭಹಾರೈಸಿದರು.




ಈ ಸಂದರ್ಭದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಮುಂಬೈ ಕಲ್ಯಾಣ್ ಓಂ ಶಕ್ತಿ ಮಹಿಳಾ ಸಂಘದ ಸದಸ್ಯರಾದ ಜಯಶ್ರೀ ಕೆ ಶೆಟ್ಟಿ,ಉಷಾ ಆನಂದ್ ಶೆಟ್ಟಿ, ಗ್ರೀಷ್ಮ ಪಿ ಶೆಟ್ಟಿ,ಶ್ವೇತ ಎಸ್ ಶೆಟ್ಟಿ, ಅಡ್ಯಾರ್ ದೇವಿಪ್ರಸಾದ್ ರೈ ಗೆಜ್ಜೆ ಉದಯಕುಮಾರ್ ರೈ ನಾಗನಕಜೆ, ಪದ್ಮನಾಭ ರೈ, ಸುಲಕ್ಷಣ್ ರೈ ಪೈಕ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ತೀರ್ಥ ಕುಮಾರ್ ಪೈಕ ಎಸ್ ಡಿ ಎಂ ಸಿ ಸದಸ್ಯರಾದ ಸೋಮನಾಥ ದರ್ಖಾಸು, ಸುಧಾಕರ್ ಕಾಣಿಯೂರು, ಶಿಕ್ಷಕಿಯರಾದ ಗೀತಾ ಕುಮಾರಿ, ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ, ಜಯಲತಾ ಉಪಸ್ಥಿತರಿದ್ದರು. ಶಿಕ್ಷಕಿ ಶೋಭಿತಾರವರು ಅಭಿನಂದನಾ ಪತ್ರ ವಾಚಿಸಿದರು. ಮುಖ್ಯಗುರು ಶಶಿಕಲಾರವರು ಸ್ವಾಗತಿಸಿ, ಶಿಕ್ಷಕ ಜನಾರ್ದನ ಹೇಮಳ ವಂದಿಸಿದರು. ಅಡ್ಯಾರ್ ದೇವಿಪ್ರಸಾದ್ ರೈ ಗೆಜ್ಜೆ ಕಾರ್ಯಕ್ರಮ ನಿರೂಪಿಸಿದರು.










