






ಪುತ್ತೂರು: ಇತ್ತೀಚೆಗೆ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಇದರ ನೂತನ ಅಧ್ಯಕ್ಷರಾಗಿ ಪದ ಪ್ರದಾನವನ್ನು ಸ್ವೀಕರಿಸಿದ ಈಶ ವಿದ್ಯಾಲಯದ ಪ್ರಾಂಶುಪಾಲ ಡಾ.ಗೋಪಾಲಕೃಷ್ಣ ಹಾಗೂ ಅವರ ಪತ್ನಿ ಶಾರದಾಕೃಷ್ಣ ರವರನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಮತಿ ಪ್ರಭಾವತಿ, ಮಾಜಿ ಅಧ್ಯಕ್ಷ ಜಗನ್ನಾಥ ಪೂಜಾರಿ, ಕಾರ್ಯದರ್ಶಿ ಪ್ರೇಮಾ ಅಜ್ಜಿಕಲ್ಲು, ಕೋಶಾಧಿಕಾರಿ ಆಶಾ ಯೋಗೀಶ್, ಟ್ರಸ್ಟಿಗಳು, ಸದಸ್ಯರು ಉಪಸ್ಥಿತರಿದ್ದರು.













