






ಕಾಣಿಯೂರು: ಎಣ್ಮೂರು ವಿವೇಕ ಜಾಗ್ರತ ಬಳಗದ ಆಶ್ರಯದಲ್ಲಿ ವಿದ್ಯಾರ್ಥಿ ದೀಪ ಯೋಜನೆಯಡಿಯಲ್ಲಿ ಶಿಶು ಸಂದೀಪ ಕಾರ್ಯಕ್ರಮವು ಬೊಬ್ಬೆಕ್ಕೇರಿ ಸರಕಾರಿ ಹಿರಿಯ ಶಾಲೆಯಲ್ಲಿ ನಡೆಯಿತು. ಡಿವೈನ್ ಪಾರ್ಕ್ ಸಂಸ್ಥೆಯ ರಾಜ್ಯ ಮಟ್ಟದ ತರಬೇತುದಾರ ಪ್ರಕಾಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಅಂಗವಾಗಿ 7 ನೇ ತರಗತಿಯ 6 ಮಂದಿ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿಗಳೇ ಯಶಸ್ಸು ಕನಸಲ್ಲ’ ಪುಸ್ತಕ ನೀಡಲಾಯಿತು.



ವಿವೇಕ ಜಾಗೃತ ಬಳಗ ಎಣ್ಮೂರು ಇದರ ಅಧ್ಯಕ್ಷ ಅರವಿಂದ ಕೆ. ಎಸ್, ವಿವೇಕಶ್ರೀ ದಿವಾಕರ ಮರಕ್ಕಡ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಜನಾರ್ದನ ಹೇಮಳ ಸ್ವಾಗತಿಸಿ, ಮುಖ್ಯಶಿಕ್ಷಕಿ ಶಶಿಕಲಾ ವಂದಿಸಿದರು.













