







ನಾವು ದಿನನಿತ್ಯ ಹೃದಯದ ಕಾಯಿಲೆಗಳು, ಕ್ಯಾನ್ಸರ್ ಅಥವಾ ಕಿಡ್ನಿ ವೈಫಲ್ಯದ ಬಗ್ಗೆ ಚರ್ಚಿಸುತ್ತೇವೆ. ಆದರೆ ನಮ್ಮ ದೇಹದ ಅತ್ಯಂತ ಪ್ರಮುಖ ರಾಸಾಯನಿಕ ಕಾರ್ಖಾನೆಯಾಗಿರುವ ‘ಯಕೃತ್ತು’ (Liver) ಹಾನಿಗೊಳಗಾಗುವ ‘ಹೆಪಟೈಟಿಸ್’ ಕಾಯಿಲೆಯ ಬಗ್ಗೆ ನಮಗೆ ತೀರಾ ಅಲಕ್ಷ್ಯವಿದೆ.


ಏನಿದು ಹೆಪಟೈಟಿಸ್?
ಇದು ಮುಖ್ಯವಾಗಿ ವೈರಸ್ ಸೋಂಕಿನಿಂದ ಯಕೃತ್ತಿಗೆ ಬರುವ ಉರಿಯೂತ. ಹೆಪಟೈಟಿಸ್ ಬಿ ಮತ್ತು ಸಿ ವೈರಸ್‌ಗಳು ದೇಹದೊಳಗೆ ವರ್ಷಗಳ ಕಾಲ ಯಾವುದೇ ರೋಗಲಕ್ಷಣ ತೋರಿಸದೆ ಸದ್ದಿಲ್ಲದೆ ಲಿವರ್ ಅನ್ನು ಹಾನಿ ಮಾಡುತ್ತವೆ. IDE karanakke ಇದನ್ನು ‘ಮೌನ ಕೊಲೆಗಾರ’ (Silent Killer) ಎನ್ನಲಾಗುತ್ತದೆ.



ವೈಜ್ಞಾನಿಕ ಸತ್ಯ ಮತ್ತು ಜಾಗೃತಿ
ಕಲುಷಿತ ನೀರು, ಆಹಾರ, ಅಸುರಕ್ಷಿತ ಸೂಜಿಗಳು ಮತ್ತು ಲೈಂಗಿಕ ಸಂಪರ್ಕದ ಮೂಲಕ ಇದು ಹರಡುತ್ತದೆ. ಆದರೆ ಈ ಕಾಯಿಲೆಯ ಬಗ್ಗೆ ಸಮಾಜದಲ್ಲಿ ಹರಡಿರುವ ಮೂಢನಂಬಿಕೆಗಳು ರೋಗಿಗಳನ್ನು ಮತ್ತಷ್ಟು ಕುಗ್ಗಿಸುತ್ತವೆ. ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಮತ್ತು ಲಸಿಕೆ (Vaccine) ಪಡೆದರೆ ಇದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ನಮ್ಮ ಜವಾಬ್ದಾರಿ
ಇಂದಿನ ಜಂಕ್ ಫುಡ್ ಸಂಸ್ಕೃತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ ಲಿವರ್ ಕಾಯಿಲೆಗಳು ಹೆಚ್ಚುತ್ತಿವೆ. ವರ್ಷಕ್ಕೊಮ್ಮೆ ಲಿವರ್ ಪ್ರೊಫೈಲ್ ಟೆಸ್ಟ್ ಮಾಡಿಸಿಕೊಳ್ಳುವುದು ಮತ್ತು ಹೆಪಟೈಟಿಸ್ ವಿರುದ್ಧ ಲಸಿಕೆ ಪಡೆಯುವುದು ಪ್ರತಿಯೊಬ್ಬರ ಆದ್ಯತೆಯಾಗಬೇಕು.”ನಮ್ಮ ಯಕೃತ್ತು ಒಂದೇ, ನಮ್ಮ ಜೀವನವೂ ಒಂದೇ. ಅದರ ಸುರಕ್ಷತೆ ನಮ್ಮ ಜವಾಬ್ದಾರಿ.










