






ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲದಲ್ಲಿ ಆ.22 ರಂದು Indian Academy of Pediatrics, D.K ಮತ್ತು Adolescent Health Academy, Karnataka ಸಹಯೋಗದಲ್ಲಿ “T-Teach Module” – ಹದಿಹರೆಯದವರ ಯೋಗಕ್ಷೇಮ ಕುರಿತು ಶಾಲಾ ಶಿಕ್ಷಕರಿಗೆ ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು.



ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ದ.ಕ. ಅಧ್ಯಕ್ಷ ಡಾ. ಅಶ್ವಿನ್ ಬಾಳಿಗ ಕಾರ್ಯಾಗಾರ ಉದ್ಘಾಟಿಸಿ, ಮೊದಲ ಅವಧಿಯಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಸಂವಹನ ಕೌಶಲ್ಯಗಳ ಕುರಿತು ಮಾತನಾಡಿದರು.ಎರಡನೇ ಅವಧಿಯಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಂಗಳೂರಿನ ಪೀಡಿಯಾಟ್ರಿಕ್ಸ್ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥೆ ಡಾ. ಸುಚೇತ ಎಸ್. ರಾವ್ ಅವರು ಕಲಿಕೆ, ಪ್ರೌಢಾವಸ್ಥೆ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಅಸ್ವಸ್ಥತೆಗಳ ಬಗ್ಗೆ ಮಾಹಿತಿ ನೀಡಿದರು.





ಮೂರನೇ ಅವಧಿಯಲ್ಲಿ ಪುತ್ತೂರಿನ ಹದಿಹರೆಯದವರ ಆರೋಗ್ಯ ಸಲಹೆಗಾರರು ಮತ್ತು ಅಡೋಲೆಸೆಂಟ್ ಹೆಲ್ತ್ ಅಕಾಡೆಮಿ ಕರ್ನಾಟಕದ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಸುಲೇಖಾ ವರದರಾಜ್ ಅವರು ಸಮಸ್ಯಾತ್ಮಕ ನಡವಳಿಕೆ ಹೊಂದಿರುವ ಹದಿಹರೆಯದವರನ್ನು ನಿಭಾಯಿಸುವ ಕುರಿತು ಮಾತನಾಡಿದರು.ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಭುವನೇಶ್ವರಿ ವಂದಿಸಿದರು.










