ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಆ.12 ರಂದು ಏರ್ಪಡಿಸಿದ್ದ ಶಾಲಾ ಮಟ್ಟದ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.

10ನೇ ತರಗತಿಯ ಅಭಿಷೇಕ್ ಪ್ರಭು ಮತ್ತು ಉದಿತ್ ಟಿ ಪ್ರಥಮ ಸ್ಥಾನ ಪಡೆದು 1000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿದ್ದಾರೆ.10ನೇ ತರಗತಿಯ ಜೀವನ್ ಕೆ ಮತ್ತು ಪ್ರಣಾಮ್ ಡಿ.ಕೆ ದ್ವಿತೀಯ ಸ್ಥಾನ ಪಡೆದು 750 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿದ್ದಾರೆ.8ನೇ ತರಗತಿಯ ತನೀಶ್ ವಿ ಗೌಡ ಮತ್ತು ನವನೀತ್ ತೃತೀಯ ಸ್ಥಾನ ಪಡೆದು 500 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿದ್ದಾರೆ.

9ನೇ ತರಗತಿಯ ವಿನ್ಯಾಸ್ ಬನ್ನೂರು, ಕೃತಾರ್ಥ್ ಜೆ ಬಂಗೇರ, 8ನೇ ತರಗತಿಯ ಧ್ರುವಿನ್ ರೈ ಕುಳ, ಗೌರವ್ ವಿ.ಎನ್ ಪ್ರೋತ್ಸಾಹಕ ಬಹುಮಾನ ಪಡೆದಿದ್ದಾರೆ.ವಿದ್ಯಾರ್ಥಿಗಳಿಗೆ ಶಿಕ್ಷಕಿ ಮಾನಸ ವಿ ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಮತ್ತು ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here