






ಪುತ್ತೂರು : ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಅವರು ಆ.12ರಂದು ಏರ್ಪಡಿಸಿದ್ದ ಶಾಲಾ ಮಟ್ಟದ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳದಲ್ಲಿ 10 ನೇ ತರಗತಿಯ ಅಭಿಷೇಕ್ ಪ್ರಭು ಚಿಕ್ಕಮುಡ್ನೂರು ರಾಧಕೃಷ್ಣ ಮತ್ತು ಗೀತಾ ರವರ ಪುತ್ರ ಮತ್ತು ಉದಿತ್ ಟಿ ಚಿಕ್ಕಮುಡ್ನೂರು ಬಾಸ್ಕರ ಸುವರ್ಣ ಮತ್ತು ವಸಂತಿ ಯವರ ಪುತ್ರ ಪ್ರಥಮ ಸ್ಥಾನ ಪಡೆದು ರೂ 1೦೦೦ ನಗದು, ಪ್ರಶಸ್ತಿ ಪತ್ರ ಹಾಗೂ ಪದಕ, 10 ನೇ ತರಗತಿಯ ಜೀವನ್ ಕೆ ಹಾರಾಡಿ ಕೆ ಜಯರಾಮ ಮತ್ತು ಸರಸ್ವತಿ ಡಿ ಯವರ ಪುತ್ರ ಮತ್ತು ಪ್ರಣಾಮ್ ಡಿ ಕೆ ಮಾಡಾವು ದಿನೇಶ್ ಎಂ ಮತ್ತು ಜ್ಯೋತಿ ಕೆ ಯವರ ಪುತ್ರ ದ್ವಿತೀಯ ಸ್ಥಾನ ಪಡೆದು ರೂ 750 ನಗದು, ಪ್ರಶಸ್ತಿ ಪತ್ರ ಹಾಗೂ ಪದಕ, 8ನೇ ತರಗತಿಯ ತನೀಶ್ ವಿ ಗೌಡ ನೆಹರುನಗರ ವೆಂಕಪ್ಪ ಗೌಡ ಮತ್ತು ಉಷಾ ರವರ ಪುತ್ರ ಮತ್ತು ನವನೀತ್ ನೆಹರುನಗರ ವಾಸಪ್ಪ ಗೌಡ ಮತ್ತು ಅನಿತ ರವರ ಪುತ್ರ ತೃತೀಯ ಸ್ಥಾನ ಪಡೆದು ರೂ 5೦೦ ನಗದು, ಪ್ರಶಸ್ತಿ ಪತ್ರ ಹಾಗೂ ಪದಕ, ಹಾಗೂ 9ನೇ ತರಗತಿಯ ವಿನ್ಯಾಸ್, ಬನ್ನೂರು ಗಣೇಶ್ ಮತ್ತು ವಿಜಯಲಕ್ಷ್ಮಿ ಯವರ ಪುತ್ರ ಮತ್ತು ಕೃತಾರ್ಥ್ ಜೆ ಬಂಗೇರ ಇಡ್ಕಿದು ಜಯಂತ ಮತ್ತು ಸುಮಿತ್ರ ರವರ ಪುತ್ರ, 8 ನೇ ತರಗತಿಯ ಧ್ರುವಿನ್ ರೈ ಕುಳ ಅಶೋಕ ಕುಮಾರ್ ರೈ ಮತ್ತು ವನಿತ ರವರ ಪುತ್ರ ಮತ್ತು ಗೌತಮ್ ಕೆ ಕೆಮ್ಮಾಯಿ ಕೆ ಉಮೇಶ ಮತ್ತು ಉಮಾವತಿಯವರ ಪುತ್ರ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಶಿಕ್ಷಕಿ ಮಾನಸ ವಿ ಯವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಗಾಯತ್ರಿ ಎಸ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ ಅಭಿನಂದನೆ ಸಲ್ಲಿಸಿರುತ್ತಾರೆ.












