ಸೆ. 14,15 ರಂದು ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂಘದಲ್ಲಿ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.14 ಮತ್ತು 15 ರಂದು ನಡೆಯಲಿದೆ. ಸೆ.14 ರಂದು ಬೆಳಗ್ಗೆ ಗಂಟೆ 8 ರಿಂದ ಶ್ರೀ ಗಣೇಶ ಪ್ರತಿಷ್ಠೆ ನಂತರ ಶ್ರೀ ಹರಿ ಭಜನಾ ಮಂಡಳಿ ಗಾಣಂತಿ,ಶ್ರೀ ಪಾಂಡುರಂಗ ಭಜನಾ ಮಂಡಳಿ ಮನವಳಿಕೆ,ಶ್ರೀ ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರು, ಭಜನೆ ನಡೆದು,ಗಣಹೋಮ ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಆನ್ನಸಂತರ್ಪಣೆ ನಡೆಯಲಿದೆ. ಮದ್ಯಾಹ್ನ ನಂತರ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಳೇನೆರೆಂಕಿ, ಶ್ರೀ ಮಹಾಮಾಯ ಭಜನಾ ಮಂಡಳಿ ಗಡಿಯಾರ್ನಡ್ಕ ರವರಿಂದ ಭಜನೆ ನಡೆದು ,ವಿದ್ಯಾರ್ಥಿಗಳಿಂದ ಮತ್ತು ಸಾರ್ವಜನಿಕ ರಿಂದ ಭಕ್ತಿಗಾನ

ಶ್ರೀ ದುರ್ಗಾಂಬಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ವಿದುಷಿ ಶ್ರೀ ಮತಿ ಪ್ರಮೀಳಾ ಲೋಕೇಶ್ ರವರ ಶಿಷ್ಯರಿಂದ ಭರತನಾಟ್ಯ ನಡೆದು ಸಭಾಕಾರ್ಯಕ್ರಮ ನಡೆಯಲಿದೆ.ಸಭಾಧ್ಯಕ್ಷತೆಯನ್ನು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ವಹಿಸಲಿದ್ದು, ಆಲಂಕಾರು ಶ್ರೀ ದುರ್ಗಾಂಬಾ ಪ್ರೌಡಶಾಲೆಯ ನಿವೃತ್ತ ಶಿಕ್ಷಕರಾದ ನಾರಾಯಣ ಭಟ್.ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದು.ದ.ಕ ಜಿಲ್ಲೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ,ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಅಜಿತ್ ಪಾಲೇರಿ,ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಕುಮಾರ್ ಅತ್ರಿಜಾಲು,ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಹೇಮಂತ್ ರೈ ಮನವಳಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


ಸೆ.15 ಮಂಗಳವಾರ ರಂದು 8:೦೦ರಿಂದ ಶ್ರೀ ಗಣಪತಿ ಹೋಮ ನಂತರ ಮಾತೃಶೀ ಭಜನಾ ಮಂಡಳಿ‌ಕೊಂಡಾಡಿ ಕೊಪ್ಪ, ಶ್ರೀ ದುರ್ಗಾಂಬಾ ಪದವಿಪೂರ್ವ ಆಲಂಕಾರಿನ ವಿದ್ಯಾಥಿಗಳಿಂದ ,ಶ್ರೀ ಶಾರದಾಂಬಾ ಭಜನಾ ಮಂಡಳಿ ಕುಂತೂರು,ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ಕುಂತೂರು ರವರಿಂದ ಭಜನೆ ನಡೆದು ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ.ಮದ್ಯಾಹ್ನ ನಂತರ ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ಇವರಿಂದ ಸುದರ್ಶನ ಗರ್ವಭಂಗ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ ಮಹಾಪೂಜೆ ಸಂಜೆ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಆಲಂಕಾರಿನಿಂದ ಕುಂತೂರುವರೆಗೆ ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ ಕುಂತೂರು,ಶ್ರೀ ದುರ್ಗಾಶಕ್ತಿ ಮಕ್ಕಳ ಕುಣಿತ ಭಜನಾ ಮಂಡಳಿ ಆಲಂಕಾರು, ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಮಕ್ಕಳ ಭಜನೆಯೊಂದಿಗೆ ಮೆರವಣಿಗೆ ನಡೆದು ಕುಂತೂರಿನಲ್ಲಿ ಶ್ರೀ ಗಣೇಶ ವಿಗ್ರಹದ ಜಲಸ್ತಂಭನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಅಗಮಿಸಿ ತನು,ಮನ,ಧನಗಳಿಂದ ಸಹಕರಿಸಿ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗುವಂತೆ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಕಾರ್ಯದರ್ಶಿ ಪಿ. ಈಶ್ವರ ಗೌಡ ಪಜ್ಜಡ್ಕ ,ಅಡಳಿತಾಧಿಕಾರಿ ಶ್ರೀಪತಿರಾವ್ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here