ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ನಿವ್ವಳ ಲಾಭ ರೂ.4 ಲಕ್ಷದ 54 ಸಾವಿರ, ಬೋನಸ್ ಲೀ.1.68 ಪೈಸೆ, ಶೇ.25 ಡಿವಿಡೆಂಡ್

ಪುತ್ತೂರು: ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರುರವರ ಅಧ್ಯಕ್ಷತೆಯಲ್ಲಿ ಸೆ.10 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು.

ಸಂಘದ ಕಾರ್ಯದರ್ಶಿ ನಳಿನಿ ರೈಯವರು 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘವು ವರದಿ ಸಾಲಿನಲ್ಲಿ 1,23,906 ಲೀಟರ್ ಹಾಲು ಖರೀದಿಸಿ 1,18,810 ಕೆಜಿ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಿರುತ್ತದೆ ಮತ್ತು ವರದಿ ಸಾಲಿನಲ್ಲಿ 1185 ಚೀಲ ಪಶು ಆಹಾರ 370 ಕೆಜಿ ಸಮೃದ್ಧಿ ಮತ್ತು 800 ಕೆಜಿ ಲವಣ ಮಿಶ್ರಣ ಮತ್ತು ಸೈಲೇಜ್ ಮಾರಾಟ ಮಾಡಿರುತ್ತದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರು ಮಾತನಾಡಿ, ಸರ್ವ ಸದಸ್ಯರ ಸಂಪೂರ್ಣ ಬೆಂಬಲದೊAದಿಗೆ ಸಂಘವು ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಸಂಘದ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದರು.ಸAಘವು ವರದಿ ವರ್ಷದಲ್ಲಿ ರೂ.4 ಲಕ್ಷದ 54 ಸಾವಿರದ 110 ನಿವ್ವಳ ಲಾಭ ಗಳಿಸಿದ್ದು ಇದರಲ್ಲಿ ಸದಸ್ಯರಿಗೆ ಲೀಟರ್‌ಗೆ ರೂ.1.68 ಪೈಸೆ ಬೋನಸ್ ನೀಡಲಾಗುವುದು ಇದಲ್ಲದೆ ಶೇ.25 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ ಜಿಲ್ಲಾ ಹಾಲು ಒಕ್ಕೂಟದ ವೈದ್ಯಾಧಿಕಾರಿ ಡಾ.ಸತೀಶ್ ರಾವ್‌ರವರು ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಕ್ಕೂಟಕ್ಕೆ ಹೆಚ್ಚು ಹಾಲು ಬರುತ್ತಿದೆ. ಹೈನುಗಾರಿಕೆ ಎಂದಿಗೂ ನಷ್ಟದ ಉದ್ಯಮ ಅಲ್ಲ ಜಾನುವಾರು ಸಾಕಾಣಿಕೆ ನಮ್ಮನ್ನು ಎಂದಿಗೂ ಸೋಲಲು ಬಿಡುವುದಿಲ್ಲ ಆದರೆ ಸರಿಯಾದ ರೀತಿಯಲ್ಲಿ ಜಾನುವಾರು ಸಾಕಾಣಿಕೆ ಮಾಡುವುದು ಅವಶ್ಯಕ ಎಂದರು. ಇದಲ್ಲದೆ ಜಾನುವಾರುಗಳಿಗೆ ಬರುವ ಚರ್ಮಗಂಟು ರೋಗ ಸಹಿತ ಬೇರೆ ಬೇರೆ ರೋಗಗಳ ಬಗ್ಗೆ ಮಾಹಿತಿ ನೀಡಿ ಯಾವ ರೀತಿಯಲ್ಲಿ ಮುಂಜಾಗೃತೆ ವಹಿಸಿಕೊಳ್ಳಬೇಕು ಎಂದು ತಿಳಿಸಿದರು. ದ.ಕ ಹಾಲು ಒಕ್ಕೂಟದ ವೈದ್ಯಾಧಿಕಾರಿ ಡಾ.ಅನುದೀಪ್‌ರವರು ಮಾತನಾಡಿ, ತಮ್ಮಲ್ಲಿರುವ ಪ್ರತಿಯೊಂದು ಜಾನುವಾರುಗಳಿಗೂ ತಪ್ಪದೆ ವಿಮೆಯನ್ನು ಮಾಡಿಸಬೇಕು, ವಿಮೆ ಮಾಡಿಸಿದ ಬಳಿಕ ಅದರ ಕಿವಿಯಲ್ಲಿನ ಟ್ಯಾಗ್ ಕಳಚಿ ಹೋಗದಂತೆ ನೋಡಿಕೊಳ್ಳಿ, ಒಂದು ವೇಳೆ ಬಿದ್ದು ಹೋದರೆ ತಕ್ಷಣವೇ ಈ ಬಗ್ಗೆ ಮಾಹಿತಿ ಕೊಟ್ಟು ಹೊಸ ಟ್ಯಾಗ್ ಹಾಕಿಸಿಕೊಳ್ಳಿ, ಟ್ಯಾಗ್ ಇಲ್ಲದೆ ಹೋದರೆ ವಿಮೆ ದೊರೆಯುವುದಿಲ್ಲ ಎಂದು ತಿಳಿಸಿದರು.ಇದಲ್ಲದೆ ಜಾನುವಾರುಗಳ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡಿದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾರವರು ಮಾತನಾಡಿ, ಕಾಮಧೇನು ಎಂದು ಕರೆಸಿಕೊಳ್ಳುವ ದನ ಪ್ರತಿಯೊಬ್ಬನ ಮನೆಯಲ್ಲೂ ಇರಬೇಕು, ಡೈರಿಗೆ ಹಾಲು ಹಾಕದಿದ್ದರೂ ಮನೆಯಲ್ಲೊಂದು ದನ ಇರಲಿ ಎಂದು ತಿಳಿಸಿದರು. ಜಾನುವಾರುಗಳು ಇದ್ದಲ್ಲಿ ನೆಮ್ಮದಿ, ಶಾಂತಿ ಇದೆ ಅದಕ್ಕಾಗಿಯೇ ಅದನ್ನು ಗೋ ಮಾತೆ ಎಂದು ಕರೆಯುತ್ತಾರೆ ಎಂದ ಅವರು, ಜಾನುವಾರುಗಳ ಸಾಕಾಣಿಕೆ ಬಗ್ಗೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.


ಅತೀ ಹೆಚ್ಚು ಹಾಲು ನೀಡಿದವರಿಗೆ ಬಹುಮಾನ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುತ್ತಿರುವ ಹೈನುಗಾರ ರೈತರನ್ನು ಈ ಸಂದರ್ಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಇದರಲ್ಲಿ ಪ್ರಥಮ ಬಹುಮಾನವನ್ನು ಸುಧಾಕರ ಶೆಟ್ಟಿ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ದಿನೇಶ್ ರೈ ಹಾಗೂ ತೃತೀಯ ಬಹುಮಾನವನ್ನು ಶಶಿಕಲಾರವರು ಪಡೆದುಕೊಂಡರು. ಉಳಿದಂತೆ ಹಾಲು ಹಾಕುತ್ತಿರುವ ಸದಸ್ಯರಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ವಸಂತ ಶೆಟ್ಟಿ, ಸುಧಾಕರ ಶೆಟ್ಟಿ,ಮೋಹನದಾಸ್ ರೈ ಕುಂಬ್ರ,ಕೆ.ದಿನೇಶ್ ರೈ, ವಾರಿಜಾಕ್ಷಿ ಪಿ.ಶೆಟ್ಟಿ, ಅದ್ದು ಯಾನೆ ಅದ್ರಾಮ, ಚಿತ್ರಾ ಎನ್.ಟಿ, ಕರುಣಾಕರ ಕೇಶವ,ಆನಂದ ಕೆ, ವಿದ್ಯಾ ಉಪಸ್ಥಿತರಿದ್ದರು. ನಿರ್ದೇಶಕ ಅಶೋಕ್ ಪೂಜಾರಿ ಬೊಳ್ಳಾಡಿ ವಂದಿಸಿದರು. ಹಾಲು ಪರೀಕ್ಷಕಿ ಹರಿಣಾಕ್ಷಿ ಎಸ್. ಸಹಕರಿಸಿದ್ದರು.

LEAVE A REPLY

Please enter your comment!
Please enter your name here