






ಪುತ್ತೂರು: ಬನ್ನೂರು ಗ್ರಾಮದ ದೇವಸ್ಯ ಮನೆಯ ವೆಂಕಪ್ಪ ಗೌಡರ ಪತ್ನಿ ಪುಷ್ಪಾವತಿಯವರು ಸ್ವಗೃಹದಲ್ಲಿ ಆ.22ರಂದು ನಿಧನರಾಗಿದ್ದು, ಅವರ ವೈಕುಂಠ ಸಮಾರಾಧನೆ, ನುಡಿನಮನ ಕಾರ್ಯಕ್ರಮ ಸೆ.6ರಂದು ಅವರ ಮನೆಯಾದ ಶ್ರೀ ಹರಿ ನಿಲಯದಲ್ಲಿ ನಡೆಯಿತು.


ಎವಿಜಿ ಅಸೋಸಿಯೇಷನ್ ಮುಖ್ಯಸ್ಥ ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯ ಸಂಚಾಲಕ ಎವಿ ನಾರಾಯಣ ಅವರು ನುಡಿ ನಮನ ಸಲ್ಲಿಸಿದರು.



ಮೃತರ ಪತಿ, ಮಕ್ಕಳಾದ ಹರೀಶ, ಸುರೇಶ, ಯೋಗೀಶ, ಸೊಸೆಯಂದಿರು, ಮೊಮ್ಮಕ್ಕಳು, ಊರ ಗೌಡರಾದ ಈಶ್ವರ ಗೌಡ ಗೋಳ್ತಿಲ, ವಿಶ್ವನಾಥ ಕಲ್ಲಿಮಾರು ಭರತ್ ಕುಂಟ್ಯಾನ, ಮೋಹನ ದೇವಸ್ಯ ಮತ್ತು ಕುಟುಂಬದ ಹಿರಿಯರಾದ ಈಶ್ವರ ಗೌಡ ಶೀನಪ್ಪ ಗೌಡ, ಪದ್ಮಯ್ಯ ಗೌಡ ಇನ್ನೂ ಹಲವು ಗಣ್ಯರು ನೆಂಟರು ಹಾಗೂ ದೇವಸ್ಯ ಕುಟುಂಬಸ್ಥರು ನುಡಿನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










