






ಪುತ್ತೂರು: ಬ್ಯಾಂಕ್ ಆಫ್ ಬರೋಡಾ ತನ್ನ ಮುಂದಿನ ಪೀಳಿಗೆಯ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಬಾಬ್ ವರ್ಲ್ಡ್ 2.0 ಅನ್ನು ಬಿಡುಗಡೆ ಮಾಡಿದೆ.


ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2026ರಲ್ಲಿ ಸೆ.11ರಂದು ಈ ಆ್ಯಪ್ ಲೋಕಾರ್ಪಣೆಯಾಯಿತು. ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಸಂಜಯ್ ಲೋಹಿಯಾ ಅವರಿಗೆ ಬ್ಯಾಂಕಿನ ಎಂಡಿ ಮತ್ತು ಸಿಇಒ ಡಾ.ದೇಬದತ್ತ ಚಂದ್ ಪ್ರಾತ್ಯಕ್ಷಿಕೆ ನೀಡಿದರು.ಎಐ ಆಧಾರಿತ ಈ ಆ್ಯಪ್ ಸಂವಾದಾತ್ಮಕ ಬ್ಯಾಂಕಿಂಗ್, ವೈಯಕ್ತಿಕ ಹಣಕಾಸು ನಿರ್ವಹಣೆ, ಹೈಪರ್-ಪರ್ಸನಲೈಸೇಶನ್ ಮತ್ತು ಬಹುಹಂತದ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಧ್ವನಿ-ಚಾಲಿತ ಪಾವತಿ, ಪಿಎಫ್ಎಂ ಮಾಡ್ಯೂಲ್ ಮೂಲಕ ಆರ್ಥಿಕ ಸ್ಥಿತಿಗತಿಯ ಸಮಗ್ರ ವೀಕ್ಷಣೆ, ಹಿರಿಯ ನಾಗರಿಕರು, ಮಹಿಳೆಯರು, ಎನ್‌ಆರ್‌ಐ, ಯುವಕರಿಗೆ ಪ್ರತ್ಯೇಕ ಅನುಭವ ನೀಡುತ್ತದೆ.ಈ ಕುರಿತು ಮಾತನಾಡಿದ ಡಾ.ದೇಬದತ್ತ ಚಂದ್, ಬಾಬ್ ವರ್ಲ್ಡ್ 2.0 ಗ್ರಾಹಕ ಕೇಂದ್ರಿತ, ಭವಿಷ್ಯಕ್ಕೆ ಸಜ್ಜಾದ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಮೈಲಿಗಲ್ಲು ಎಂದು ಹೇಳಿದರು.













