ಶೀನಪ್ಪ ಗೌಡ ಹಳೆನೂಜಿ ನಿಧನ

0

ಕಡಬ: ನೂಜಿಬಾಳ್ತಿಲ ಗ್ರಾಮದ ಹಳೆನೂಜಿ ಮನೆ ಶೀನಪ್ಪ ಗೌಡ (83) ಅವರು ಸೆ.24ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪತ್ನಿ ಮೀನಾಕ್ಷಿ, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ರ ವಸಂತ ಗೌಡ ಎನ್., ನೂಜಿಬಾಳ್ತಿಲ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಗೌಡ ಹಳೆನೂಜಿ, ಸಹೋದರ ಬಾಬು ಗೌಡ ಹಳೆನೂಜಿ, ಸೊಸೆಯಂದಿರು, ಐವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.


ಮೃತರ ಅಂತಿಮ ದರ್ಶನಕ್ಕೆ ಬಂಧು-ಮಿತ್ರರು, ಭಾರತೀಯ ಜನತಾ ಪಕ್ಷದ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಒಕ್ಕಲಿಗ ಗೌಡ ಸಮಾಜದ ಪ್ರಮುಖರು ಸೇರಿದಂತೆ ಹಲವರು ಭೇಟಿ ನೀಡಿ ಗೌರವ ಸಲ್ಲಿಸಿದರು.

LEAVE A REPLY

Please enter your comment!
Please enter your name here