







ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ನ ಶವ ಪೆಟ್ಟಿಗೆಯನ್ನು ನಿರ್ವಹಣೆ ಮಾಡಿಕೊಂಡು ಸಮಾಜದ ಆಪದ್ಬಾಂಧವನಾಗಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಗೂಡ್ಸ್ ರಿಕ್ಷಾ ಚಾಲಕ,ಪ್ರವೀಣ್ ಕುಮಾರ್ ಎಂ ಮುಂಡಕೊಚ್ಚಿ,(47ವ)ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೆ 25 ರಂದು ನಿಧನರಾದರು.


ಮೃತರು ಪತ್ನಿ ಪ್ರೇಮಾಲತಾ ಡಿ , ಪುತ್ರ ಪ್ರಣಾಮ್ ಕುಮಾರ್, ಪುತ್ರಿಯರಾದ ಪ್ರತೀಕ್ಷಾ, ಮತ್ತು ಹಿಮಶ್ರೀ, ತಂದೆ ರಾಮಣ್ಣ ನಾಯ್ಕ್, ತಾಯಿ ಪದ್ಮಿನಿ ಹಾಗೂ ಸಹೋದರ ಪ್ರಸನ್ನ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.













