ಸುದ್ದಿ ಅರಿವು ಕೇಂದ್ರದ ಸಾರಥ್ಯದಲ್ಲಿ, ಎಸ್.ಆರ್.ಕೆ ಲ್ಯಾಡರ್ಸ್ ಪ್ರಾಯೋಜಕತ್ವದಲ್ಲಿ ಮುದ್ದುಕೃಷ್ಣ ಇನ್‌ಸ್ಟಾಗ್ರಾಮ್ ರೀಲ್ಸ್ ಸ್ಪರ್ಧೆ ; ಇಂದು ಬಹುಮಾನ ವಿತರಣೆ

0

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸುದ್ದಿ ಅರಿವು ಕೇಂದ್ರದ ಸಾರಥ್ಯದಲ್ಲಿ, ಎಸ್.ಆರ್. ಕೆ ಲ್ಯಾಡರ್ಸ್ ಪ್ರಾಯೋಜಕತ್ವದಲ್ಲಿ ನಡೆದ ಮುದ್ದುಕೃಷ್ಣ ಇನ್ಸ್ಟಾಗ್ರಾಮ್ ರೀಲ್ಸ್ ಸ್ಪರ್ಧೆಯ ವಿಜೇತರಿಗೆ ಸೆ.28ರಂದು (ಇಂದು) ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಎಸ್.ಆರ್.ಕೆ ಲ್ಯಾಡರ್ಸ್ ಸಂಸ್ಥೆಯ ಮಾಲಕರಾದ ಕೇಶವ ಅಮೈ ಬಹುಮಾನ ವಿತರಿಸಲಿದ್ದು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಮತ್ತು ವಿವೇಕಾನಂದ ಕಾಲೇಜಿನ ಹಿರಿಯ ಉಪನ್ಯಾಸಕಿ ಡಾ. ವಿಜಯ ಸರಸ್ವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಜೇತರ ವಿವರ:

ಅತೀ ಹೆಚ್ಚು ಲೈಕ್ಸ್ ಪಡೆದ ರೀಲ್ಸ್ ವಿಭಾಗದಲ್ಲಿ ಅದ್ವಾನ್ ಕೃಷ್ಣ ಮತ್ತು ಗೀತಾ ಪ್ರಥಮ ಸ್ಥಾನ, ಅಯಾಂಶ್ ಮತ್ತು ಅಕ್ಷಯ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮುದ್ದುಕೃಷ್ಣ ವಿಭಾಗದಲ್ಲಿ ಅಯಾಂಶ್ ಮತ್ತು ಅಕ್ಷಯ ಪ್ರಥಮ ಸ್ಥಾನ, ಸಾನಿಯಾ ಕೋಟ್ಯಾನ್ ಮತ್ತು ಸೋನಿಯಾ ಸೂರಜ್ ದ್ವಿತೀಯ ಸ್ಥಾನ, ಗ್ಯಾನ್ ಮತ್ತು ಗೌತಮಿ ತೃತೀಯ ಸ್ಥಾನ ಪಡೆದಿದ್ದಾರೆ.

ತುಂಟಕೃಷ್ಣ ವಿಭಾಗದಲ್ಲಿ ಅನಿಕಾ ಮತ್ತು ಭವ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here