








ವಿಟ್ಲ : ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘವು 12ನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿರುವ ಹಿನ್ನೆಲೆಯಲ್ಲಿ ವಿಟ್ಲದ ವಿ.ಹೆಚ್. ಕಾಂಪ್ಲೆಕ್ಸ್ ನಲ್ಲಿ ಪ್ರಧಾನ ಕಚೇರಿಯಲ್ಲಿ ಬಾಲಕೃಷ್ಣ ಕಾರಂತರ ನೇತೃತ್ವದಲ್ಲಿ ಪ್ರಧಾನ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ಹಾಗೂ ಗಣಪತಿ ಹವನ ನಡೆಯಿತು.



ಅಧ್ಯಕ್ಷರಾದ ಸಂಜೀವ ಪೂಜಾರಿ ಎನ್., ಉಪಾಧ್ಯಕ್ಷರಾದ ಬಾಬು ಕೆ.ವಿ., ನಿರ್ದೇಶಕರಾದ ಡಾ.ಗೀತಪ್ರಕಾಶ್ ಎ., ಶ್ರೀಧರ ಬಿ., ಜಗದೀಶ್ ವಿ., ಸಂಜೀವ ಪೂಜಾರಿ ಎಂ., ರವಿ ಬಿ.ಕೆ., ಮಾಧವ ಪಿ., ವನಿತಾಚಂದ್ರಹಾಸ, ಶ್ವೇತಾ ಪದ್ಮನಾಭ,ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪಿ., ಕುಕ್ಕಾಜೆ ಶಾಖಾ ವ್ಯವಸ್ಥಾಪಕರಾದ ಸಚಿತ್ ಕುಮಾರ್, ಪುಣಚ ಶಾಖಾ ವ್ಯವಸ್ಥಾಪಕರಾದ ಪ್ರಮೀಳ ಎ., ಸಂಘದ ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಗಾರರು, ಸಂಘದ ಸದಸ್ಯರು ಉಪಸ್ಥಿತರಿದ್ದರು.













