







ಆಲಂಕಾರು: ರಾಮಕುಂಜ ಗ್ರಾಮದ ಕೊಂಡಪ್ಪಾಡಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅ.18ರಂದು ದುರ್ಗಾಹೋಮ ನಡೆಯಿತು.


ಬೆಳಿಗ್ಗೆಯಿಂದ ಹೋಮ ನಡೆದು, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.ಭಾಷಾ ವಿದ್ವಾಂಸ ಅವಿನಾಶ್ ಕೊಡಂಕಿರಿ ಅವರು “ಉಪಾಸನೆ” ವಿಷಯದ ಕುರಿತು ಧರ್ಮ ಜಾಗೃತಿ ಉಪನ್ಯಾಸ ನೀಡಿದರು.




ದೇವಸ್ಥಾನದ ಪ್ರಧಾನ ಅರ್ಚಕ ರಾಮಶಂಕರ ಮುಚ್ಚಿಂತಾಯ ಮತ್ತು ತಂಡದವರು ಪೂಜಾ ವಿಧಿವಿಧಾನ ನೆರವೇರಿಸಿದರು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಗೋಕುಲ್ ಪಿ.ಎಸ್., ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಊರ-ಪರವೂರ ಭಕ್ತಾದಿಗಳು ಆಗಮಿಸಿ ತೀರ್ಥಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.










