ಕೊಯ್ಯೂರು: ಅಂಗನವಾಡಿ ಕೇಂದ್ರಕ್ಕೆ ಉಮೇಶ್ ಕೆ.ಹೆಚ್ ರವರಿಂದ ಜೋಕಾಲಿ ಕೊಡುಗೆ

0

ಕೊಯ್ಯೂರು: ಕೊಯ್ಯೂರು ಗ್ರಾಮದ ಬಲ್ಯರೊಟ್ಟು ಎಂಬಲ್ಲಿ ಮಿನಿ ಅಂಗನವಾಡಿ ಕೇಂದ್ರಕ್ಕೆ ಸಕಲೇಶ್ ಪುರದ ಅಂಚೆಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರಾರಿ ನಿವಾಸಿ ಉಮೇಶ್ ಕೆ.ಹೆಚ್ ಜೋಕಾಲಿಯನ್ನು ಕೊಡುಗೆಯಾಗಿ ನೀಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.

ಕಾರ್ಯಕ್ರಮವನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಗ್ರಾ.ಪಂ ಅಧ್ಯಕ್ಷರಾದ ಜಗನ್ನಾಥ, ಸದಸ್ಯರಾದ ಲೋಕೇಶ್ ಪಿ, ಹೇಮಾವತಿ, ಹರೀಶ್ ಗೌಡ, ಪ್ರಗತಿಪರ ಕೃಷಿಕ ಪ್ರಚಂಡ ಭಾನು ಪಾಂಬೇಲು, ಆಶಾಕಾರ್ಯಕರ್ತೆ ಕಮಲ ಹಾಗೂ ಊರ ವರು , ಪೋಷಕರು ಭಾಗಿಯಾಗಿದ್ದರು.

ಸಭಾ ಕಾರ್ಯಕ್ರಮದಲ್ಲಿ ಉಮೇಶ್ ಕೆ.ಹೆಚ್ ಇವರಿಗೆ ಸನ್ಮಾನ ವನ್ನು ಮಾಡಲಾಯಿತು. ಈ ವೇಳೆ ಬಲ್ಯರೊಟ್ಟು ಅಂಗನವಾಡಿ ಕೇಂದ್ರದ ಮಕ್ಕಳ ಆಟಕ್ಕಾಗಿ ಜಾರು ಬಂಡಿ ಕೊಡುಗೆ  ನೀಡುವುದಾಗಿ ಘೋಷಿಸಿದರು.

LEAVE A REPLY

Please enter your comment!
Please enter your name here