ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮ

0

ಲಾಯಿಲ : ಹಬ್ಬದ ವಾತಾವರಣದಿಂದ ಗಣೇಶೋತ್ಸವವನ್ನು ಆಚರಿಸುತ್ತಿರುವುದರೊಂದಿಗೆ ಸಾಧಕರನ್ನು ಗೌರವಿಸುವುದು ಸಮಿತಿಯ ಬೆಳವಣಿಗೆ ಉತ್ತಮ ಅಂಶವೆಂದು ಚಾಮುಂಡೇಶ್ವರಿ ಕ್ಷೇತ್ರ ಅರಿಕೋಡಿ ಬೆಳಾಲು ಇದರ ಧರ್ಮದರ್ಶಿಗಳಾದ ಹರೀಶ್ ಹೇಳಿದರು.
ಅವರು ಲಾಯಿಲ ಗಣೇಶೋತ್ಸವದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಮುಖ್ಯಅತಿಥಿಗಳಾಗಿ ಜಯಂತ ಗೌಡ ಗುರಿಪಳ್ಳ ಭಾಗವಹಿಸಿದರು. ಸಮಿತಿಯ ಅಧ್ಯಕ್ಷ ಭೋಜರಾಜ ಪ್ರಗತಿನಗರ, ಉಪಾಧ್ಯಕ್ಷ ಸದಾಶಿವ ಸಮಗಾರ ಉಪಸ್ಥಿತರಿದ್ದರು.

ಈ ಸಂದರ್ಭ ಜಾನಪದ ಕಲಾವಿದರಾದ ಉದಯ ಕುಮಾರ್ ಲಾಯಿಲ , ಸುರಕ್ಷಾ ಕನ್ನಾಜೆ , ಯಕ್ಷಗಾನ ಕಲಾವಿದ ಆನಂದ ಜೋಗಿ, ಬೆಳ್ತಂಗಡಿ ಮೆಸ್ಕಾಂ ಯೋಗೀಶ್, ರಾಜೇಶ್, ವಿಜಯ , ಕಿಟ್ಟಣ ಶೆಟ್ಟಿ,  ಉಜಿರೆ ಮೆಸ್ಕಾಂ  ನಾರಾಯಣ ಗೌಡ.  ರವರನ್ನು ಗಣ್ಯ ಅತಿಥಿಗಳು ಸನ್ಮಾನಿಸಿದರು. 5ಲಕ್ಷ ವೆಚ್ಚದಲ್ಲಿ ಕಲಾಮಂದಿರಕ್ಕೆ ಇಂಟರ್‌ಲಾಕ್ ಅಳವಡಿಸಿದ  ಶಾಸಕ ಹರೀಶ್ ಪೂಂಜರಿಗೆ ಗೌರವ ಸಲ್ಲಿಸಲಾಯಿತು.
ರುಕ್ಮಯ್ಯ ಕನ್ನಾಜೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಅರವಿಂದ ಶೆಟ್ಟಿ ಸ್ವಾಗತಿಸಿ, ಗಣೇಶ ವರದಿ ವಾಚಿಸಿ, ಉಪಾಧ್ಯಕ್ಷ ಪುಷ್ಪರಾಜ್ ಪಡ್ಲಾಡಿ ವಂದಿಸಿದರು.

LEAVE A REPLY

Please enter your comment!
Please enter your name here