ಲಾಯಿಲ: ಸಂಗಮ ಸಭಾಭವನ ಉದ್ಘಾಟನಾ ಸಮಾರಂಭ 

0

ಲಾಯಿಲ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ  ಜ್ಯೋತಿ ಆಸ್ಪತ್ರೆ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಸಂಗಮ ಸಭಾಭವನ ಉದ್ಘಾಟನಾ  ಕಾರ್ಯಕ್ರಮವು ಇಂದು ನೆರವೇರಿತು. ಈ ಕಾರ್ಯಕ್ರಮದ   ಉದ್ಘಾಟನೆಯನ್ನು  ಶ್ರೀ ಆದಿಚುಂಚನಗಿರಿ ಮಹಾಸಂಸ್ದಾಪನ ಶಾಖಾ ಮಠ  ಕಾವೂರಿನ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ನೆರವೇರಿಸಿದರು.

ಕರ್ನಾಟಕ ಸರಕಾರ ಮಾಜಿ ಸಚಿವರು  ಶ್ರೀ ಕೆ. ಗಂಗಾಧರ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ  ಮಾನ್ಯ ಶಾಸಕರಾದ ಹರೀಶ್ ಪೂಂಜ,  ವಾಣಿ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದ ಶ್ರೀ.ಪಿ ಕುಶಾಲಪ್ಪ ಗೌಡ, ಶ್ರೀಮತಿ ಸುಧಾ ಬರಗೂರು ಬೆಂಗಳೂರು ಉಪಸ್ಥಿತರಿದ್ದರು.  ಸಂಗಮ ಕಲಾಭವನದ ಪಾಲುದಾರರಾದ  ಉಜಿರೆ ಕಾರ್ತಿಕ್ ಎಂಟರ್ ಪ್ರ್ಯೆಸಸ್ ನ ಮಾಲಿಕರಾದ  ಶ್ರೀಮತಿ ಮತ್ತು ಶ್ರೀ ಕೆ ಧರ್ಮಣ್ಣ  ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here