ನೀಟ್ ಫಲಿತಾಂಶ ಪ್ರಕಟ, ಎಕ್ಸೆಲ್ ಕಾಲೇಜಿನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳೇ ತಾಲೂಕಿಗೆ ಅಗ್ರ ಸ್ಥಾನ

0

ಗುರುವಾಯನಕೆರೆ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ವೈದ್ಯಕೀಯ ತರಗತಿಗಳ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳು ಮಹತ್ವದ ಸಾಧನೆಯನ್ನು ಮಾಡಿದ್ದಾರೆ.

ಆಗ್ನೇಯ ಡಿ ಎ 581, ಆದಿತ್ಯ ಕೃಷ್ಣ ಕೆ. 580,ಉಜ್ವಲ ಎನ್.ಕೆ ರಾಷ್ಟ್ರ ಮಟ್ಟದ ಕೆಟಗರಿ ರಾಂಕಿಂಗ್ ನಲ್ಲಿ 1022 ರಾಂಕ್ ಗಳಿಸಿದ್ದಾರೆ. ಎಕ್ಸೆಲ್ ಕಾಲೇಜಿನ 180 ವಿದ್ಯಾರ್ಥಿಗಳ ಪೈಕಿ ಒಟ್ಟು 73 ವಿದ್ಯಾರ್ಥಿಗಳು 525 ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 172 ವಿದ್ಯಾರ್ಥಿಗಳು ವೈದ್ಯಕೀಯ ತರಗತಿಗಳ ಪ್ರವೇಶಾತಿಗೆ ಅರ್ಹತೆ ಪಡೆದಿದ್ದಾರೆ. ನೀಟ್, ಜೆ ಇ ಇ, ಸಿ ಇ ಟಿ, ನಾಟ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ತರಬೇತಿ ಪಡೆದಿದ್ದಾರೆ.

ದಕ್ಷಿಣ ಭಾರತದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಎರಡು ದಶಕಗಳಿಗೂ ಮಿಕ್ಕಿ ಬೋಧನೆ ಮಾಡಿ ಅನುಭವವಿರುವ ಪ್ರಾಧ್ಯಾಪಕ ವೃಂದ ಇದೀಗ ಎಕ್ಸೆಲ್ ನಲ್ಲಿ ಇರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ರಾಜ್ಯದ ಎಲ್ಲಾ ಭಾಗದ ವಿದ್ಯಾರ್ಥಿಗಳು ಇಲ್ಲಿ ಪ್ರವೇಶಾತಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here