ಹೋಲಿ ರಿಡೀಮರ್ ಪೋಷಕ ವೃಂದದಿಂದ ಶಿಕ್ಷಕರಿಗೆ ಗುರುವಂದನೆ

0

ಬೆಳ್ತಂಗಡಿ:  ಶಿಕ್ಷಕರ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಗಿ ಶಾಲಾ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಶಿಕ್ಷಕರ ದಿನವನ್ನು ವಿನೂತನವಾಗಿ ಸೆ. 10 ರಂದು ಹೋಲಿ ರಿಡೀಮರ್ ಶಾಲೆಯಲ್ಲಿ  ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಚರ್ಚ್ ನ 21 ಆಯೋಗಗಳ ಸಂಯೋಜಕ ವಿನ್ಸೆಂಟ್ ಡಿಸೋಜರವರು ಶಿಕ್ಷಕರ ದಿನದ ಮಹತ್ವವನ್ನು ತಿಳಿಸಿ, ಶುಭಾಶಯವನ್ನು ಕೋರಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಅಮೋಘವಾಗಿ ಕಾರ್ಯಕ್ರಮವನ್ನು ಆಯೋಜಿಸಿದ ಪೋಷಕ ವೃಂದಕ್ಕೆ ಶುಭವನ್ನು ಹಾರೈಸಿದರು. ಶ್ರೀ ರೋಹನ್ ಡಿಸೋಜ ರವರು ರಚಿಸಿದ ಶುಭಾಶಯಗೀತೆಯನ್ನು ಪುಟಾಣಿ ಮಕ್ಕಳು ಹಾಡಿದರು. ವಿದ್ಯಾರ್ಥಿಗಳು ಹಾಡು ನೃತ್ಯದ ಮೂಲಕ ಗುರುವಂದನೆ ಸಲ್ಲಿಸಿದರು.

ಶಿಕ್ಷಕರಿಗೆ ಮನರಂಜನಾ ಆಟಗಳನ್ನು ಆಡಿಸಿ, ಬಹುಮಾನವನ್ನು ವಿತರಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ಬೊನವೆಂಚರ್ ಪಿಂಟೋ ರವರು ಸ್ವಾಗತಿಸಿ, ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ವಿಲ್ಮಾ ರೇಗೊ ವಂದಿಸಿದರು. ಶ್ರೀಮತಿ ಝೀಟಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here