ಬೆಳ್ತಂಗಡಿ: ಸರಕಾರದ ದಾಖಲೆಗಳ ದುರುಪಯೋಗ ಪ್ರಕರಣ: ಗ್ರಾಮ ಲೆಕ್ಕಿಗ ಜಯಚಂದ್ರ ಜಾಮೀನು ಅರ್ಜಿ ವಜಾ: ಗ್ರಾಮಲೆಕ್ಕಿಗನನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ

0

ಬೆಳ್ತಂಗಡಿ:  ಸರಕಾರಿ ದಾಖಲೆಗಳನ್ನು ದುರುಪಯೋಗ ಮಾಡಿದ ಪ್ರಕರಣ ಸಂಬಂಧ ಗ್ರಾಮಲೆಕ್ಕಿಗ ಹಾಗೂ ಬ್ರೋಕರ್ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಹಶೀಲ್ದಾರ್ ಪೃಥ್ವಿ ಸಾನಿಕಂ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸರು ಸೆ 7ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ ಶೆಟ್ಟಿ ಹಳ್ಳಿಯ ಸಿ ಎ ಕೆರೆ ಮನೆಯಿಂದ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಬೆಳ್ತಂಗಡಿ ಕೋರ್ಟಿನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿ ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಇನ್ನು ಮಂಗಳೂರು ಸೆಕ್ಷನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕಾಗಿದೆ ಇನ್ನು ಪ್ರಕರಣ ಸಂಬಂಧಪಟ್ಟ ರಾಜೇಂದ್ರ ಕೆ ವಿ ಅವರು ಸರಕಾರಿ ದಾಖಲೆ ದುರುಪಯೋಗ ಪ್ರಕರಣ ಸಂಬಂಧಪಟ್ಟ ಈತ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯ ಚಂದ್ರನ ಕರ್ತವ್ಯ ಲೋಪ ಎಸಗಿದರಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here