ಅನ್ಸಾರಿಯಾ ಹೆಲ್ಪ್ ಲೈನ್ ನಾವೂರು ಸಮಿತಿ ಅಸ್ತಿತ್ವಕ್ಕೆ

0

ಬೆಳ್ತಂಗಡಿ: ಮುಹ್‌ಯ್ಯದ್ದೀನ್ ಜುಮಾ ಮಸೀದಿ ಮುರ ನಾವೂರು ಇದರ ಅಧೀನದಲ್ಲಿ ಅನ್ಸಾರಿಯಾ ಹೆಲ್ಪ್ ಲೈನ್ ಸಮಿತಿಯ ರಚನೆಯು ಜಮಾ‌ಅತ್ ಅದ್ಯಕ್ಷ ಆಲಿಕುಂಞಿ ಸಖಾಫಿಯವರ ನೇತೃತ್ವದಲ್ಲಿ ಮುರ ಮಸೀದಿ ವಠಾರದಲ್ಲಿ ನಡೆಯಿತು.

ಎಸ್‌ವೈಎಸ್ ನಾಯಕ ಅಬ್ಬಾಸ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಜಮಾ‌ಅತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಯ ನೇತೃತ್ವದಲ್ಲಿ ಸಮಿತಿ ರಚನೆಗೆ ಚಾಲನೆ ನೀಡಿದರು.

ಅನ್ಸಾರಿಯಾ ಹೆಲ್ಪ್ ಲೈನ್ ನಾವೂರು ಇದರ ಅದ್ಯಕ್ಷರಾಗಿ ಸಲೀಂ ಮುರ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಯು ಶರೀಫ್ , ಕೋಶಾಧಿಕಾರಿಯಾಗಿ ಅಶ್ರಫ್ ನಾವೂರು, ಉಪಾಧ್ಯಕ್ಷರಾಗಿ ಅಬ್ಬಾಸ್ ಸಖಾಫಿ ಮತ್ತು ಬಶೀರ್ ಪಿ.ವೈ, ಕಾರ್ಯದರ್ಶಿಯಾಗಿ ಸಾದಿಕ್ ನಾವೂರು ,ಅಶ್ರಫ್ ಡಿ.ಎಮ್ ಮತ್ತು ಅಸಿಪ್ ಮುರ, ಲೆಕ್ಕ ಪರಿಶೋಧಕರಾಗಿ ಅಯ್ಯೂಬ್ ಸ‌ಅದಿ, ಸುಲೈಮಾನ್.ಪಿ.ವೈ, ಹಾಗೂ ಸದಸ್ಯರುಗಳನ್ನು ಆಯ್ಕೆಮಾಡಲಾಯಿತು.

ಈ ಸಮಿತಿಯು ಮುಂದಿನ ದಿನಗಳಲ್ಲಿ ಜಮಾ‌ಅತ್ ವ್ಯಾಪ್ತಿಯ ಬಡ ಹೆಣ್ಣು ಮಕ್ಕಳ ಮದುವೆ, ಸಾಮಾಜಿಕ -ದಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ, ರೋಗಿಗಳಿಗೆ ಸಹಾಯ,
ಮುಂತಾದ ಕಾರ್ಯಚರಣೆ ಮಾಡಲಿದೆ.

ಕಾರ್ಯಕ್ರಮದಲ್ಲಿ ಜಮಾ‌ಅತ್ ಪ್ರ ಕಾರ್ಯದರ್ಶಿ ಖಾದರ್ ನಾವೂರು, ಸದಸ್ಯರಾದ ಅಬೂಬಕ್ಕರ್ ಪಿ.ಯು ಉಪಸ್ಥಿತರಿದ್ದರು. ಸಲೀಂ ಮುರ ಸ್ವಾಗತಿಸಿದ ಕಾರ್ಯಕ್ರಮದಲ್ಲಿ
ಶರೀಫ್ ಶಾಝ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here