ಬಾರ್ಯ: ಗ್ರಾಮ ಪಂಚಾಯತ್ ಮಟ್ಟದ ಕಬಡ್ಡಿ ಮತ್ತು ಖೋ ಖೋ ಪಂದ್ಯಾಟ

0

ಬಾರ್ಯ: ಬಾರ್ಯ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಪಂಚಾಯತ್ ಮಟ್ಟದ ಕಬಡ್ಡಿ ಮತ್ತು ಖೋ ಖೋ ಪಂದ್ಯಾಟವು ಸೆ.22ರಂದು ಜರುಗಿತು.

ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷೆ  ಉಷಾ ಶರತ್ ಕುಮಾರ್, ಉಪಾಧ್ಯಕ್ಷ  ಪಿ ಕೆ ಉಸ್ಮಾನ್, ಸದಸ್ಯರು , ಪಂಚಾಯತ್ ಅಭಿವೃಧ್ಧಿ ಅಧಿಕಾರಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮೂರುಗೋಳಿ , ಗುಣಕರ ರೈ ಗುತ್ತಿಗೆದಾರರು ,  ಗುಣಕರ ಅಗ್ನಾಡಿ ಎಲೆಕ್ಟ್ರಿಕ್ ಗುತ್ತಿಗೆದಾರರು , ಅರ್ಪಿತ್ ಬೊಳಕ್ಕಿಲ ಗುತ್ತಿಗೆದಾರರು ,ಅಶ್ರಫ್ ,’ಕಜೆಮಾರ್’ ಹಾರ್ಡ್‌ವೇರ್ ಮೂರುಗೋಳಿ, ಸುದೇಶ್ ಅದಮ್ಮ ಹಾಗೂ ಬಾರ್ಯ ಮತ್ತು ಪುತ್ತಿಲ ಗ್ರಾಮಸ್ಥರು ಸಹಕರಿಸಿ ಯಶಸ್ವಿಗೊಳಿಸಿದರು.

ಫಲಿತಾಂಶ:

ಈ ಪಂದ್ಯಾಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಮಹಾವಿಷ್ಣು ಬಾರ್ಯ, ದ್ವಿತೀಯ ಸ್ಥಾನವನ್ನು ಭದ್ರಕಾಳಿ ಬಾರ್ಯ, ಖೋ ಖೋ ಆಟದ ಪ್ರಥಮ ಸ್ಥಾನವನ್ನು ರಾಮಾಂಜನೇಯ ಪಿಲಿಗೂಡು, ದ್ವಿತೀಯ ಸ್ಥಾನವನ್ನು ರಾಯಲ್ ಬ್ರದರ್ಸ ಕಳೆಂಜಿಬೈಲು ಇವರು ಪಡೆದುಕೊಂಡರು.

 

LEAVE A REPLY

Please enter your comment!
Please enter your name here