ಸುಧನ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಮಹಾಸಭೆ

0

ಬೆಳ್ತಂಗಡಿ: ಇಲ್ಲಿಯ ದ್ವಾರಕಾ ಡ್ರೈವಿಂಗ್ ಸ್ಕೂಲ್ ಎದುರು ಕಾಮತ್ ಅಂಗಡಿ ಮಹಡಿಯಲ್ಲಿ ಕಾರ್ಯಚಲಿಸುತ್ತಿರುವ ಸುಧನ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ. 25ರಂದು “ನಮ್ಮ ಮನೆ- ಹವ್ಯಕ ಭವನ” ಗುರುವಾಯನಕೆರೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ .ವಿ ಭಟ್ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದಲ್ಲಿ 547 ಸದಸ್ಯರನ್ನು ಹೊಂದಿದ್ದು,  ರೂ. 8,91,000/- ಪಾಲು ಬಂಡವಾಳ ದೊಂದಿಗೆ ರೂ. 1457174 ದುಡಿಯುವ ಬಂಡವಾಳ  ಹೊಂದಿದೆ. ರೂ. 1.15 ಕೋಟಿ ಮಿಕ್ಕಿದ ಠೇವಣಿ ಹೊಂದಿದ್ದು, ರೂ.1.6 ಕೋಟಿ ಸಾಲ ವಿತರಿಸಲಾಗಿದೆ. ಸಂಘದಲ್ಲಿ ಸಾರ್ವಜನಿಕ ಸೇವೆಯ ಉದ್ದೇಶದಿಂದ ಇ- ಸ್ಟ್ಯಾಂಪಿಂಗ್ ಸೌಲಭ್ಯ,  ಗ್ರೋ ಗ್ರಾಸ್ ನಿಧಿ ತೆರೆದು ನವೋತ್ಪನ್ನಗಳ ಮಾರಾಟ ವ್ಯವಸ್ಥೆ ಲಭ್ಯವಿದೆ. ವರ್ಷಂತ್ಯಕ್ಕೆ ರೂ.1.53.690 ಲಕ್ಷ ಲಾಭಗಳಿಸಿದೆ.

ಸಂಘದ  ಉಪಾಧ್ಯಕ್ಷ ಎಂ ಪರಮೇಶ್ವರ ಭಟ್ , ನಿರ್ದೇಶಕರುಗಳಾದ ಬಾಲ್ಯ ಶಂಕರ ಭಟ್ , ಯಂ ಎಸ್ ವಿಶ್ವೇಶ್ವರ ಭಟ್, ಕೆ. ಸುಬ್ಯಹ್ಮಣ್ಯ ಭಟ್, ಕೃಷ್ಣ ಭಟ್ ಕೆ, ಜಿ.ಪಿ ಶ್ಯಾಮ ಭಟ್, ಶ್ರೀಮತಿ ಸುಮಂಗಲ ಕೆ, ಶ್ರೀಮತಿ ಶ್ರೀ ದೇವಿ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ  ಪ್ರಸನ್ನ ಕುಮಾರ್ ಬಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.

ನಿರ್ದೇಶಕ ಯಂ.ಎಸ್ ವಿಶ್ವೇಶ್ವರ ಭಟ್ ಸ್ವಾಗತಿಸಿ, ಕೆ.ಉಪಾಧ್ಯಕ್ಷರಾದ  ಎಂ. ಪರಮೇಶ್ವವರ ಭಟ್  ವಂದಿಸಿದರು.

 

LEAVE A REPLY

Please enter your comment!
Please enter your name here