ವೇಣೂರು: ಗುಂಡೂರಿ ಸೇವಾಶ್ರಮಕ್ಕೆ ಮುಂಬೈ ಉದ್ಯಮಿಯಿಂದ ಸಹಾಯಹಸ್ತ

0

ವೇಣೂರು: ಗುಂಡೂರಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಅಬಲೆಯರ ಪುನರ್ವಸತಿ ಕೇಂದ್ರಕ್ಕೆ ಮುಂಬೈ ಉದ್ಯಮಿ ಸುನಿಲ್ ಆರ್. ಸಾಲ್ಯಾನ್ ಮತ್ತು ದೇವಕಿ ದಂಪತಿ ಭೇಟಿ ನೀಡಿ ಆರ್ಥಿಕ ಸಹಾಯಹಸ್ತ ನೀಡಿದರು.

ಸೇವಾಶ್ರಮದ ನಿರ್ವಹಣೆ, ಕಾಮಗಾರಿಯ ಪ್ರಗತಿಯ ಬಗ್ಗೆ ಸೂಕ್ತ ಸಲಹೆ ನೀಡಿದರು. ಉದ್ಯಮಿ ಅಶೋಕ್ ಕುಲಾಲ್ ಕೂಳೂರು, ಸುರೇಶ್ ಕುಲಾಲ್, ಜಯ ಅಂಚನ್, ಮಾಲತಿ ಜಯ ಅಂಚನ್, ಜಯಂತ್ ನೈನಾಡ್ ಮತ್ತಿತರರು ಉಪಸ್ಥಿತರಿದ್ದರು.

ಸೇವಾಶ್ರಮದ ವ್ಯವಸ್ಥಾಪಕ ಹೊನ್ನಯ್ಯ ಕಾಟಿಪಳ್ಳ ಅವರು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here