ಇಳಂತಿಲದಲ್ಲಿ ಉಚಿತ ಆಯುರ್ವೇದ ತಪಾಸಣಾ ಶಿಬಿರ

0

ಇಳಂತಿಲ : ಸಹಕಾರಿ ವ್ಯವಸಾಯಿಕ ಸಂಘ ಉಪ್ಪಿನಂಗಡಿ,ಅಮೃತ ಮಹೋತ್ಸವ 2022 ಅಮೃತ ಸಂಗಮ ವತಿಯಿಂದ ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಇವರ ಸಹಯೋಗದೊಂದಿಗೆ “ಉಚಿತ ಆಯುರ್ವೇದ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಸೆ.25 ರಂದು ಇಳಂತಿಲ ಅಂಡೆತಡ್ಕ  ದ.ಕ.ಜಿ.ಪ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್ಉದ್ಘಾಟಿಸಿ ಶುಭ ಹಾರೈಸಿದರು. ಉಪ್ಪಿನಂಗಡಿ ಸ. ವ್ಯ. ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ , ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ. ಬಿ. ಕೆ. ಪ್ರಶಾಂತ್,ದ. ಕ. ಜಿಲ್ಲಾ ಎಎಫ್ ಐ ಅಧ್ಯಕ್ಷ ಡಾ. ನಾರಾಯಣ ಅಸ್ರ ಮಾಹಿತಿ ನೀಡಿದರು. ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಭಟ್ ಶುಭ ಹಾರೈಸಿದರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ವಿ. ಪ್ರಸಾದ್ ಸ್ವಾಗತಿಸಿ, ಉಪಾಧ್ಯಕ್ಷ ಸುನಿಲ್ ಡದ್ದು ವಂದಿಸಿದರು. ಡಾ. ಗೋವಿಂದ ಪ್ರಸಾದ್ ಕಜೆ ಕಾರ್ಯಕ್ರಮ ನಿರೂಪಿಸಿದರು. ಸುಮಾರು 157 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಸನ್ಮಾನ:

ಈ ಸಂದರ್ಭದಲ್ಲಿ ಜಲ ಶೋಧಕ ಈಶ್ವರ ಭಟ್ ಕಾರ್ಯಾಪಾಡಿ, ನಿವೃತ್ತ ಅಂಚೆ ವಿತರಕ ಚೆನ್ನಪ್ಪ ಗೌಡ ಕಾಂಗಿನಾರುಬೆಟ್ಟು, ಕೃಷಿಕ ಈಶ್ವರ ಭಟ್ ಪಾರಡ್ಕ,ಕೃಷ್ಣ ಮಲೆಕುಡಿಯ, ದೈವ ಪರಿಚಾರಕ ಹರಿಯಪ್ಪ ಗೌಡ, ದೈವನರ್ತಕ ಕೂಸಪ್ಪ ಮಿತ್ತಿಲ ಇವರುಗಳನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here